ಬೆಂಗಳೂರು : ಜೀವನದಲ್ಲಿ ಮದುವೆಯಾಗುವುದು ಒಂದೇ ಬಾರಿ. ಆದ್ದರಿಂದ ಸುಂದರವಾದ, ಒಳ್ಳೆಯ ಗುಣವಿರುವಂತಹ ಸಂಗಾತಿ ಬೇಕು ಎಂದು ಎಲ್ಲರೂ ಬಯಸುತ್ತಾರೆ. ಅಂತವರು ಈ ಒಂದು ಅದ್ಭುತವಾದ ದಾನ ಮಾಡಿದರೆ ಒಳ್ಳೆಯ ಸಂಗಾತಿಯ ಪ್ರಾಪ್ತಿಯೋಗ ನಿಮ್ಮದಾಗುತ್ತದೆ. ಜೀವನದಲ್ಲಿ ಒಳ್ಳೆಯ ಗುಣವಿರುವ ಸುಂದರವಾದ ಸಂಗಾತಿ ಎಲ್ಲರಿಗೂ ಸುಲಭವಾಗಿ ಸಿಗುವುದಿಲ್ಲ. ಅದಕ್ಕೆ ಪೂರ್ವಜನ್ಮದ ಪುಣ್ಯವಿರಬೇಕು. ಗಂಡಿನ ಜಾತಕದಲ್ಲಿ ಶುಕ್ರಗ್ರಹದ ಸ್ಥಾನ ಚೆನ್ನಾಗಿದ್ದರೆ ಅವರಿಗೆ ಒಳ್ಳೆಯ ಗುಣವಿರುವ ಸುಂದರವಾದ ಹೆಂಡತಿಯ ಜೊತೆಗೆ ಸಂಪತ್ತು, ವೈಭೋಗ ಲಭಿಸುತ್ತದೆ.