ಲಕ್ಷ್ಮೀ ಪೂಜೆ ವೇಳೆ ಈ ತಪ್ಪು ಮಾಡಿದರೆ ಆರ್ಥಿಕ ನಷ್ಟ ಖಂಡಿತ

ಬೆಂಗಳೂರು, ಗುರುವಾರ, 11 ಅಕ್ಟೋಬರ್ 2018 (13:34 IST)

ಬೆಂಗಳೂರು : ಲಕ್ಷ್ಮೀ ಪೂಜೆ ಮಾಡಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಲಕ್ಷ್ಮಿ ಪೂಜೆ ಮಾಡುವ ವೇಳೆ ಕೆಲವೊಂದು ವಸ್ತುಗಳನ್ನು ಬಳಸಿದ್ರೆ ದೇವಿ ಮುನಿಸಿಕೊಳ್ತಾಳೆ. ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಹಾಗಾದ್ರೆ ಅವು ಯಾವುದೆಂದು ತಿಳಿಯೋಣ.


ಭಗವಂತ ವಿಷ್ಣು ತುಳಸಿ ಪ್ರಿಯ. ಆದ್ರೆ ಲಕ್ಷ್ಮಿಗೆ ತುಳಸಿ ಮೇಲೆ ದ್ವೇಷವಿದೆ. ಹಾಗಾಗಿ ಲಕ್ಷ್ಮಿ ಪೂಜೆ ಮಾಡುವ ವೇಳೆ ತುಳಸಿಯನ್ನು ಬಳಸಬೇಡಿ.


ಲಕ್ಷ್ಮಿಗೆ ದೀಪ ಬೆಳಗುವಾಗ ವರ್ತಿಯ ಬಣ್ಣ ಕೆಂಪಗಿರಲಿ. ಹಾಗೆ ದೀಪವನ್ನು ಬಲ ಭಾಗಕ್ಕಿಡಿ. ಎಡಭಾಗಕ್ಕೆ ದೀಪವನ್ನು ಇಡಬೇಡಿ.
ಧನಲಕ್ಷ್ಮಿ ಪೂಜೆ ಮಾಡುವ ವೇಳೆ ಅಗರಬತ್ತಿಯನ್ನು ಬಲಭಾಗಕ್ಕೆ ಹಚ್ಚಬೇಡಿ. ಅಗರಬತ್ತಿ, ಧೂಪ, ದ್ರವ್ಯಗಳನ್ನು ಎಡಭಾಗಕ್ಕೆ ಇಡಿ.
ಬಿಳಿಯ ಹೂವನ್ನು ಲಕ್ಷ್ಮಿಗೆ ಅರ್ಪಿಸಬೇಡಿ. ಕೆಂಪು ಗುಲಾಬಿ ಅಥವಾ ಕೆಂಪು ಕಮಲದ ಹೂವನ್ನು ದೇವಿಗೆ ನೈವೇದ್ಯ ಮಾಡಿ.


ಭಗವಂತ ವಿಷ್ಣುವಿನ ಪೂಜೆ ಮಾಡದೆ ನೀವು ದೇವಿ ಲಕ್ಷ್ಮಿಯ ಪೂಜೆ ಮಾಡಿದ್ರೆ ಫಲ ಸಿಗುವುದಿಲ್ಲ. ಹಾಗಾಗಿ ಸಂಜೆ ಮೊದಲು ಗಣೇಶನ ಪೂಜೆ ಮಾಡಿ ನಂತ್ರ ವಿಷ್ಣು ಹಾಗೂ ಲಕ್ಷ್ಮಿಯ ಪೂಜೆ ಮಾಡಿ.


ಲಕ್ಷ್ಮಿ ಪೂಜೆ ಮಾಡುವ ವೇಳೆ ಪ್ರಸಾದವನ್ನು ದಕ್ಷಿಣ ದಿಕ್ಕಿಗಿಡಿ. ಹಾಗೆ ಹೂ, ಪತ್ರೆಯನ್ನು ದೇವಿಯ ಮುಂದಿಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ನವರಾತ್ರಿಯಂದು ಇವುಗಳನ್ನು ಯಾವುದೇ ಕಾರಣಕ್ಕೂ ಮಾಡಬೇಡಿ

ಬೆಂಗಳೂರು : ನವರಾತ್ರಿ ಶುರುವಾಗಿದೆ. ಈ 9 ದಿನ ಭಕ್ತರು ದೇವಿ ದುರ್ಗೆಯ ವಿವಿಧ ರೂಪವನ್ನು ಪೂಜೆ ಮಾಡಿ ವೃತ ...

news

ಮಹಾಲಯ ಅಮವಾಸ್ಯೆಯ ಮಹತ್ವವೇನು? ತಿಳಿಬೇಕಾ

ಬೆಂಗಳೂರು : ಆಶ್ವೀಜ ಮಾಸದ ಅಮವಾಸ್ಯೆಯನ್ನು ಮಹಾಲಯ ಅಮವಾಸ್ಯೆಯೆಂದು ಆಚರಿಸಲಾಗುತ್ತದೆ. ದಸರಾ ಮೊದಲು ಬರುವ ...

news

ಇಂದಿನ ರಾಶಿ ಭವಿಷ್ಯ ಹೀಗಿದೆ ನೋಡಿ

ಬೆಂಗಳೂರು : ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು. ಏನು ಮಾಡಬಾರದು? ಯಾವ ಯಾವ ...

news

ಯಾವುದೇ ಕಾರಣಕ್ಕೂ ಈ ಸಮಯದಲ್ಲಿ ಬಿಲ್ವ ಪತ್ರೆಯನ್ನು ಗಿಡದಿಂದ ಕೀಳಬೇಡಿ

ಬೆಂಗಳೂರು : ಶಿವನಿಗೆ ಬಿಲ್ವಪತ್ರೆ ಅತಿ ಪ್ರಿಯವಾದ ವಸ್ತು. ಇದರಿಂದ ಶಿವನನ್ನು ಪೂಜಿಸಿದರೆ ಆತ ಬೇಗ ...