ಬೆಂಗಳೂರು : ಯಾವುದೇ ದೇವರನ್ನು ಪೂಜಿಸಿದರೂ, ಹೋಮ-ಹವನ, ಯಜ್ಞ- ಯಾಗ, ದಾನ-ಧರ್ಮ ಮಾಡಿದರೂ, ತೀರ್ಥ ಸ್ನಾನ, ಸಮುದ್ರ ಸ್ನಾನ ಮಾಡಿದರೂ ಬೇಗ ಫಲ ಸಿಗುವುದಿಲ್ಲ. ಆದರೆ ಕಲಿಯುಗದಲ್ಲಿ ವಿನಾಯಕ ಹಾಗು ದುರ್ಗೆಯನ್ನು ಪೂಜಿಸಿದರೆ ಬೇಗ ಫಲ ಸಿಗುತ್ತೆ ಎಂದು ಧರ್ಮಶಾಸ್ತ್ರದಲ್ಲಿ ಉಲ್ಲೇಖವಿದೆ. ವಿನಾಯಕನನ್ನು ವಿಘ್ನ ನಿವಾರಕ ಎಂದು ಹೇಳುತ್ತಾರೆ. ಆದರೆ ಎಷ್ಟೋ ಜನರಿಗೆ ತಿಳಿಯದ ಒಂದು ವಿಷಯವೆನೆಂದರೆ ಅವನೇ ವಿಘ್ನ ಕಾರಕನೂ ಕೂಡ ಎಂಬುದು. ಅಂದರೆ ವಿಘ್ನಗಳನ್ನು ಸೃಷ್ಟಿಸುವುದು ಅವನೆ.