ಬೆಂಗಳೂರು : ಯಾವುದೇ ರೀತಿಯ ಗ್ರಹಣ ಸಂಭವಿಸಿದಾಗ ದೇವಾಲಯಗಳನ್ನು ಮುಚ್ಚುವ ಸಂಪ್ರದಾಯ ನಮ್ಮಲ್ಲಿ ಆಚರಣೆಯಲ್ಲಿದೆ. ಗ್ರಹಣ ಹಿಡಿಯುವ ಮುನ್ನವೇ ಆಲಯಗಳನ್ನು ಮುಚ್ಚುತ್ತಾರೆ. ಮತ್ತೆ ಗ್ರಹಣ ಬಿಟ್ಟ ಬಳಿಕವೇ ಆಲಯಗಳನ್ನು ತೆಗೆಯುತ್ತಾರೆ. ಆ ಬಳಿಕ ಆಲಯದಲ್ಲಿ ಪೂಜೆಗಳು, ಶುದ್ಧಿ ಕಾರ್ಯಕ್ರಮಗಳು ಮಾಡಿದ ಬಳಿಕವಷ್ಟೇ ಮತ್ತೆ ಭಕ್ತರಿಗೆ ಅನುಮತಿ ನೀಡುತ್ತಾರೆ. ಇಷ್ಟಕ್ಕೂ ಗ್ರಹಣ ಹಿಡಿಯುವ ಸಮಯದಲ್ಲಿ ಆಲಯಗಳನ್ನು ಮುಚ್ಚಲು ಇರುವ ಕಾರಣಗಳೇನು ಎಂಬುದು ಇಲ್ಲಿದೆ ನೋಡಿ. ರಾಹು, ಕೇತುಗಳಿಬ್ಬರೂ ಸೂರ್ಯ, ಚಂದ್ರರನ್ನು ನುಂಗಲು