ಬೆಂಗಳೂರು : ಎಲ್ಲರಿಗೂ ತಾವು ಅಭಿವೃದ್ಧಿ ಹೊಂದಬೇಕೆಂದು ಆಸೆ ಇರುತ್ತದೆ. ಆದರೆ ಅದು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನೀವು ಹುಟ್ಟಿದ ರಾಶಿಗನುಗುಣವಾಗಿ ಕೆಲವು ನಿಯಮಗಳನ್ನು ಪಾಲಿಸಿದರೆ ನೀವು ಅಭಿವೃದ್ಧಿ ಹೊಂದಬಹುದು. ಅದರಲ್ಲಿ ಸಿಂಹರಾಶಿಯಲ್ಲಿ ಹುಟ್ಟಿದವರು ಅಭಿವೃದ್ಧಿ ಹೊಂದಲು ಯಾವ ನಿಯಮಗಳನ್ನು ಪಾಲಿಸಬೇಕೆಂಬುದು ಇಲ್ಲಿದೆ ನೋಡಿ. ಸಿಂಹರಾಶಿಯವರು ದಕ್ಷಿಣ ದಿಕ್ಕಿನಲ್ಲಿರುವ ಮನೆಯಲ್ಲಿ ವಾಸಿಸಬೇಕು. ಇದರಿಂದ ಅವರಿಗೆ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಹಾಗೇ ಇವರು ಹಸಿದವರಿಗೆ ಅನ್ನದಾನ ಮಾಡಬೇಕು. ಈ ರಾಶಿಯವರು ಪಾರ್ವತಿ ದೇವಿಯನ್ನು ಪೂಜಿಸಬೇಕು.