ಬೆಂಗಳೂರು : ಜ್ಯೋತಿಷ್ಯಶಾಸ್ತ್ರದ ಪ್ರಕಾರ ಕೆಲವು ಮರಗಿಡಗಳನ್ನು ನಿಮ್ಮ ನಕ್ಷತ್ರಕ್ನುಗುಣವಾಗಿ ನೆಟ್ಟರೆ ಗ್ರಹದೋಷ ನಿವಾರಣೆಯಾಗುತ್ತದೆ. ಅದಕ್ಕಾಗಿಯೇ ಇತ್ತಿಚೆಗೆ ನವಗ್ರಹ ವನ, ದೇವವನಗಳ ಸಂಖ್ಯೆ ಹೆಚ್ಚುತ್ತಿದೆ. ಕಟ್ಟಡಗಳ ನಿರ್ಮಾಣಕ್ಕಾಗಿ ಈಗ ಮರಗಿಡಗಳನ್ನು ಕಡಿದುಹಾಕುತ್ತಿದ್ದಾರೆ. ಜ್ಯೋತಿಷ್ಯಶಾಸ್ತ್ರದಲ್ಲಿ ನಕ್ಷತ್ರಕ್ಕನುಸಾರವಾಗಿ ಯಾವ ಗಿಡಗಳನ್ನು ನೆಟ್ಟರೆ ಉತ್ತಮವೆಂಬುದನ್ನು ತಿಳಿಸಿದ್ದಾರೆ. ಅಶ್ವಿನಿ, ಮಘ, ಮೂಲಾ ನಕ್ಷತ್ರಗಳಿಗೆ ಕೇತುಗ್ರಹ ಅಧಿಪತಿಯಾಗಿರುವುದರಿಂದ ದರ್ಬೆ ಹಾಗು ಜಾಜಿಗಿಡವನ್ನು ಮನೆಯಲ್ಲಿ ನೆಟ್ಟು ಬೆಳೆಸಿದರೆ ಕೇತು ದೋಷ ನಿವಾರಣೆಯಾಗುತ್ತದೆ. ಭರಣಿ, ಪುಬ್ಬ, ಪೂರ್ವಾಷಾಡ ನಕ್ಷತ್ರಗಳಿಗೆ ಶುಕ್ರಗ್ರಹ