ಬೆಂಗಳೂರು : ನೀರು ಅತಿ ಅಮೂಲ್ಯವಾದ ವಸ್ತು. ಆದ್ದರಿಂದ ನೀರನ್ನು ಮಿತವಾಗಿ ಬಳಸಬೇಕು ಎನ್ನುತ್ತಾರೆ. ಹಾಗೇ ಗ್ರಂಥಗಳ ಪ್ರಕಾರ ನೀರಿಗೆ ಅವಮಾನ ಮಾಡಿದ್ರೆ ದೋಷ ತಟ್ಟುತ್ತದೆ. ನೀರನ್ನು ಅರ್ಧ ಕುಡಿದ್ರೆ, ನಿಂತು ಕುಡಿದ್ರೆ, ಅನಗತ್ಯವಾಗಿ ನೀರು ಚೆಲ್ಲಿದ್ರೆ ಪಾಪ ಸುತ್ತಿಕೊಳ್ಳುತ್ತದೆ. ನೀರಿಗೆ ಅವಮಾನ ಮಾಡಿದ್ರೆ ಜಾತಕದಲ್ಲಿ ಚಂದ್ರ ಕೆಟ್ಟ ಫಲ ನೀಡ್ತಾನೆ. ಇದ್ರಿಂದ ಅನೇಕ ರೋಗಗಳು ಕಾಡುತ್ತವೆ. ಮನಸ್ಸು ಹಾಗೂ ಕಫಕ್ಕೆ ಸಂಬಂಧಿಸಿದ ಸಮಸ್ಯೆ ಕಾಡುತ್ತದೆ. ನೀರನ್ನು ಎಚ್ಚರಿಕೆಯಿಂದ ಬಳಸಬೇಕು.