ಬೆಂಗಳೂರು : ಮನೆಗೆ ವಾಸ್ತು ಎಷ್ಟು ಮುಖ್ಯನೋ. ಹಾಗೇ ಮನೆಯಲ್ಲಿ ನಾವು ಮಾಡುವ ಕೆಲವು ಕೆಲಸಗಳು ಮನೆಯ ಸುಖ, ಶಾಂತಿ, ನೆಮ್ಮದಿಗೆ ಕಾರಣವಾಗುತ್ತದೆ. ಹೌದು. ಮನೆಯ ಮುಖ್ಯ ದ್ವಾರದಲ್ಲಿ ಸಾಸಿವೆ ಎಣ್ಣೆ, ಕುಂಕುಮದ ತಿಲಕವಿಡಿ. ಇದರಿಂದ ಮನೆಯೊಳಗೆ ದುಷ್ಟ ಶಕ್ತಿಯ ಪ್ರವೇಶ ಮಾಡುವುದಿಲ್ಲ. ವಾಸ್ತು ದೋಷ ಕಡಿಮೆಯಾಗಲಿದೆ. ಶನಿದೋಷದಿಂದ ರಕ್ಷಣೆ ಸಿಗಲಿದೆ. ಮಂಗಳವಾರ, ಭಾನುವಾರ ಮತ್ತು ಶನಿವಾರ ಸಗಣಿಯಿಂದ ಮಾಡಿದ ಧೂಪದ ಹೊಗೆಯನ್ನು ಮನೆ ಮತ್ತು ಕಚೇರಿಯ ಎಲ್ಲ ಕೊಠಡಿಗೂ ತೋರಿಸಿ.