ಬೆಂಗಳೂರು : ಕೆಲವು ಪ್ರಾಣಿಗಳು ಹಾಗೂ ಪಕ್ಷಿಗಳು ಮನೆಗೆ ಬಂದರೆ ಒಳ್ಳೆದಾಗುತ್ತದೆ ಎಂದು ಹೇಳುತ್ತಾರೆ. ಆದರೆ ಈ ಪಕ್ಷಿಗಳು ಮನೆಗೆ ಬಂದರೆ ನಿಮಗೆ ದಟ್ಟ ದಾರಿದ್ರ್ಯ ಕಾಡುತ್ತದೆಯಂತೆ. ಎಲ್ಲರಿಗೂ ತಾವು ಚೆನ್ನಾಗಿರಬೇಕೆಂಬ ಆಸೆ ಇರುತ್ತದೆ. ಆದರೆ ಈ ಪಕ್ಷಿಗಳು ಮನೆಗೆ ಬಂದರೆ ನಿಮ್ಮ ಸುಖ,ಶಾಂತಿ, ನೆಮ್ಮದಿ ನಾಶವಾಗುತ್ತದೆ ಎಂದರ್ಥ. ಬಾವಲಿ ಮನೆಗೆ ಬಂದರೆ ಮನೆಯಲ್ಲಿ ಅನಾರೋಗ್ಯ ಹೆಚ್ಚಾಗುತ್ತದೆ. ಮನೆಯ ಹಿರಿಯ ವ್ಯಕ್ತಿಗೆ ಸಾವಾಗುತ್ತದೆ. ಕಾಗೆಗಳು ಮನೆಗೆ ಪದೇ ಪದೇ ಬರಬಾರದು.