ಬೆಂಗಳೂರು : ಸೂರ್ಯನು ಧನಸ್ಸು ರಾಶಿಯಿಂದ ಮಕರ ರಾಶಿಗೆ ಸೇರುವ ಶುಭ ಸಮಯವನ್ನು ಮಕರ ಸಂಕ್ರಾಂತಿ ಎಂದು ಕರೆಯುತ್ತಾರೆ. ಹಿಂದೂ ಸಂಪ್ರದಾಯದಲ್ಲಿ ಎಲ್ಲಾ ಹಬ್ಬವನ್ನು ಚಾಂದ್ರಾಮಾನ ಮಾಸದ ಪ್ರಕಾರವೇ ಆಚರಿಸಲಾಗುತ್ತದೆ. ಆದರೆ ಮಕರ ಸಂಕ್ರಾಂತಿ ಮಾತ್ರ ಸೌರಮಾನ ಮಾಸದ ಪ್ರಕಾರ ಆಚರಿಸುವ ಏಕೈಕ ಹಬ್ಬ.