ಬೆಂಗಳೂರು : ನಮ್ಮ ಹಿಂದೂ ಸಂಪ್ರದಾಯದಲ್ಲಿ ಹಲವು ಆಚಾರ ವಿಚಾರಗಳಿವೆ. ಅವುಗಳಲ್ಲಿ ಒಂದೊಂದಕ್ಕೂ ಒಂದೊಂದು ಅರ್ಥವಿರುತ್ತದೆ. ಅದರಲ್ಲೂ ಮಹಿಳೆಯರ ಬಗ್ಗೆ ಆಚಾರಗಳು ಹೆಚ್ಚು. ಆದಕಾರಣ ಮಹಿಳೆಯರು ಯಾವ ದಿನಗಳಲ್ಲಿ ತಲೆಸ್ನಾನ ಮಾಡಬೇಕು, ಮಾಡಬಾರದು ಎಂಬುದನ್ನು ಕೂಡ ನಮ್ಮ ಸಂಪ್ರದಾಯದಲ್ಲಿ ತಿಳಿಸಲಾಗಿದೆ. ಮಹಿಳೆಯರ ಜಡೆಯ ಮೂರು ಭಾಗಗಳಲ್ಲಿ ಗಂಗಾ, ಯಮುನಾ, ಸರಸ್ವತಿ ಇರುತ್ತಾರಂತೆ. ಮಧ್ಯೆ ಭಾಗದ ಬೈತಲೆಯಲ್ಲಿ ಲಕ್ಷ್ಮೀ ದೇವಿಯ ಸನ್ನಿಧಾನವಿರುತ್ತದೆಯಂತೆ. ಆದ್ದರಿಂದ ಮಹಿಳೆಯರು ಪ್ರತಿದಿನ ತಲೆಯ ಸ್ನಾನ ಮಾಡಬಾರದು ಎಂದು