ಬೆಂಗಳೂರು : ಪ್ರತಿಯೊಬ್ಬರು ದೇಹದ ಕೊಳೆ ತೊಳೆಯಲು ಸ್ನಾನ ಮಾಡುತ್ತಾರೆ. ಆದರೆ ಶಾಸ್ತ್ರದ ಪ್ರಕಾರ ಸ್ನಾನವನ್ನು ನಮಗೆ ಅನುಕೂಲವಾದ ಸಮಯದಲ್ಲಿ ಮಾಡಬಾರದಂತೆ. ಅದಕೊಂದು ನಿಯಮ ಕೂಡ ಇದೆಯಂತೆ. ನೀವು ಸ್ನಾನ ಮಾಡುವ ಸಮಯ ನಿಮ್ಮ ಸುಖ, ಸಂತೋಷ, ಆರ್ಥಿಕ ವ್ಯವಸ್ಥೆ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಧರ್ಮಶಾಸ್ತ್ರದಲ್ಲಿ ನಾಲ್ಕು ರೀತಿಯ ಸ್ನಾನವನ್ನು ಹೇಳಲಾಗಿದೆ.