ಬೆಂಗಳೂರು: ಎಲ್ಲರಿಗೂ ತಾವು ಧನವಂತರಾಗಿರಬೇಕು ಎಂಬ ಆಸೆ ಇದ್ದೆ ಇರುತ್ತದೆ. ಕಷ್ಟ ಪಟ್ಟರೆ ಮಾತ್ರ ಹಣ ಗಳಿಸಲು ಸಾಧ್ಯ. ಆದರೆ ಕೆಲವರು ಎಷ್ಟೆ ಕಷ್ಟಪಟ್ಟರೂ ಅವರ ಕೈಯಲ್ಲಿ ಹಣ ಉಳಿಯದೆ ಎಲ್ಲಾ ಖರ್ಚಾಗಿ ಹೋಗುತ್ತದೆ. ಕೆಲವೊಮ್ಮೆ ನಮ್ಮ ದಾರಿದ್ರ್ಯಕ್ಕೆ ನಾವೇ ಕಾರಣವಾಗಿರುತ್ತೆವೆ. ನಮಗೆ ಗೊತ್ತಿಲ್ಲದೆ ಮಾಡುವ ಕೆಲಸದಿಂದ ಬಡತನ ಬರುತ್ತದೆ. ಮನೆಯಲ್ಲಿರುವ ಕೆಲವು ವಸ್ತುಗಳು ನಮ್ಮ ದಾರಿದ್ರ್ಯಕ್ಕೆ ಕಾರಣವಾಗಿರುತ್ತವೆ. ಅವುಗಳನ್ನು ಮೊದಲು ಮನೆಯಿಂದ ಹೊರಹಾಕಬೇಕು.