ಬೆಂಗಳೂರು : ಹಿಂದೂ ಧರ್ಮದಲ್ಲಿ ಆನೆಯನ್ನು ತುಂಬಾ ಪವಿತ್ರ ಮತ್ತು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಧಾರ್ಮಿಕ ಗ್ರಂಥಗಳಲ್ಲಿ ಆನೆಯನ್ನು ಧನಲಕ್ಷ್ಮಿಯ ವಾಹನವೆಂದು ನಂಬಲಾಗಿದೆ. ಆನೆಯನ್ನು ಗಣೇಶನ ಪ್ರತೀಕವೆಂದು ಪೂಜೆ ಮಾಡಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಬೆಳ್ಳಿ ಆನೆ ಮಂಗಳಕರ. ಅದು ನಕಾರಾತ್ಮಕ ಶಕ್ತಿಯನ್ನು ತೊಡೆದು ಹಾಕಿ ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸುತ್ತವೆ.