ಬೆಂಗಳೂರು : ಕನಸುಗಳು ಎ೦ದೆ೦ದಿಗೂ ಆಕರ್ಷಕವಾಗಿರುತ್ತವೆ. ಪ್ರತಿದಿನವೂ ನಾವು ಒ೦ದಲ್ಲ ಒ೦ದು ವಿಚಾರದ ಕುರಿತು ಕನಸು ಕಾಣುತ್ತಲೇ ಇರುತ್ತೇವೆ. ಈ ಹಲವಾರು ಕನಸುಗಳ ಪೈಕಿ ಕೆಲವೊ೦ದು ನಮ್ಮ ಪಾಲಿಗೆ ಅರ್ಥಪೂರ್ಣವಾಗಿದ್ದರೆ, ಮಿಕ್ಕುಳಿದವುಗಳು ಹೆಚ್ಚಾಗಿ ಅಸ್ಪಷ್ಟವಾಗಿದ್ದು, ಬಹುಬೇಗನೇ ನಮ್ಮ ಸ್ಮೃತಿಪಟಲದಿ೦ದ ಮಾಸಿಹೋಗುತ್ತವೆ. ಸೃಷ್ಟಿಯ ಆರ೦ಭದಿ೦ದಲೂ ಕೂಡ ಮಾನವರ ಪಾಲಿಗೆ ಕನಸುಗಳು ಹಾಗೂ ಕನಸುಗಳ ಕುರಿತಾದ ವ್ಯಾಖ್ಯಾನವು ಅತ್ಯ೦ತ ಒಗಟಾದ, ಬಿಡಿಸಲಾಗದ ಯಕ್ಷಪ್ರಶ್ನೆಯಾಗಿಯೇ ಉಳಿದಿದೆ.ಹಿ೦ದೂ ಜ್ಯೋತಿಷ್ಯಶಾಸ್ತ್ರದ ಪ್ರಕಾರ ವ್ಯಕ್ತಿಯೋರ್ವರು ತಮ್ಮ ಕನಸಿನಲ್ಲಿ ಮು೦ಗುಸಿಯನ್ನು