ಬೆಂಗಳೂರು : ಪ್ರತಿ ಮನೆಯಲ್ಲಿಯೂ ಬೆಳಿಗ್ಗೆ ಹಾಗೂ ಸಂಜೆ ದೇವರಿಗೆ ದೀಪ ಬೆಳಗಿ ಪೂಜೆ ಮಾಡುತ್ತಾರೆ. ಆದರೆ ಸಂಜೆ ದೇವರಿಗೆ ಪೂಜೆ ಮಾಡುವಾಗ ಈ ವಿಚಾರಗಳ ಬಗ್ಗೆ ತಿಳಿದಿರಲೇಬೇಕು. ಇಲ್ಲವಾದರೆ ದರಿದ್ರವನ್ನು ಮನೆಯೊಳಗೆ ಆಹ್ವಾನಿಸಿದಂತಾಗುತ್ತದೆ. ಸಂಜೆಯ ವೇಳೆ ಸೂರ್ಯಾಸ್ತದ ನಂತರ ಪೂಜೆ ಮಾಡುವವರು ಮನೆಯಲ್ಲಿ ಶಂಖವನ್ನು ಊದಬಾರದು. ಈ ವೇಳೆ ದೇವಾನುದೇವತೆಗಳು ಮಲಗಿರುತ್ತಾರೆ. ಆದಕಾರಣ ಅವರ ನಿದ್ರೆಗೆ ಭಂಗ ಬರುವುದರಿಂದ ಅಶುಭವಾಗುತ್ತದೆ ಎನ್ನಲಾಗಿದೆ. ಹಾಗೇ ಬೆಳಿಗ್ಗೆ ಸೂರ್ಯದೇವನ ಪೂಜೆ ಮಾಡಬಹುದು