ಬೆಂಗಳೂರು: ಮದುವೆ ಎಂದರೆ ಚಪ್ಪರ ಹಾಕಿ, ಮಾವಿನ ತೋರಣ ಕಟ್ಟಿ, ಬಾಳೆಎಲೆ ಊಟ ಮಾಡುವುದಲ್ಲ. ಮದುವೆ ಎಂದರೆ ಜೀವನದಲ್ಲಿ ಒಂದೇಸಾರಿ ನಡೆಯುವ ಹಬ್ಬ.ಎರಡು ಮನಸ್ಸುಗಳು ಜೀವನ ಪೂರ್ತಿ ಬೆರೆಯಲು ಹಾಕುವ ಮೊದಲ ಹೆಜ್ಜೆ. ಮದುವೆ ಬಗ್ಗೆ ಅನೇಕರಿಗೆ ಹಲವಾರು ಮೂಢನಂಬಿಕೆಗಳಿವೆ. ಮದುವೆ ದಿನ ಮಳೆ ಬಂದರೆ ಸಂತಾನೋತ್ಪತ್ತಿಗೆ ಹಾಗು ಸಂಪತ್ತಿಗೆ ಒಂದು ಸೂಚನೆ ಎಂದು ಭಾವಿಸುತ್ತಾರೆ. ಮದುವೆಗೂ ಮುನ್ನ ಹುಡುಗ ಹುಡುಗಿ ಒಬ್ಬರನೊಬ್ಬರು ನೋಡಬಾರದು, ನೋಡಿದರೆ ಅವರ ಮನಸ್ಸು ಬದಲಾಗುತ್ತದೆ