ಬೆಂಗಳೂರು : ಪುರುಷರಿಗೆ ಆತುರ ಬುದ್ಧಿ ಜಾಸ್ತಿ. ಕೆಲವೊಮ್ಮೆ ಈ ಆತುರ ಬುದ್ಧಿಯಿಂದ ಅವರು ತೆಗೆದುಕೊಳ್ಳುವ ಕೆಲವು ನಿರ್ಧಾರಗಳು ಅವರನ್ನು ದುರಾದೃಷ್ಟವಂತರನ್ನಾಗಿ ಮಾಡುತ್ತದೆ. ಇದರಿಂದ ಅವರಿಗೆ ಮಾತ್ರವಲ್ಲ ಅವರ ಕುಟುಂಬಕ್ಕೂ ಕೂಡ ಕಷ್ಟಗಳನ್ನು ತಂದೊಡ್ಡುತ್ತದೆ. ಆದಕಾರಣ ಮೊದಲು ಪುರುಷರು ಈ ಆತುರ ಬುದ್ಧಿಯನ್ನು ನಿಯಂತ್ರಿಸಬೇಕು. ಆಗ ಅವರು ಸರಿಯಾದ ಸಮಯಕ್ಕೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡು ಅದೃಷ್ಟದ ಕಡೆಗೆ ಸಾಗುತ್ತಾರೆ. ಅದಕ್ಕಾಗಿ ಎಲ್ಲಾ ಪುರುಷರು ತಮ್ಮ ಬಲಗೈಯಲ್ಲಿ ಪಂಚಲೋಹದ ಖಡಗವನ್ನು ಧರಿಸಬೇಕು.