ಈ ವಸ್ತುಗಳನ್ನು ಯಾವತ್ತು ಜೊತೆಯಾಗಿ ಇಡಬೇಡಿ, ದಟ್ಟ ದಾರಿದ್ರ್ಯ ಕಾಡುತ್ತದೆ

ಬೆಂಗಳೂರು| pavithra| Last Modified ಶುಕ್ರವಾರ, 12 ಮಾರ್ಚ್ 2021 (06:46 IST)
ಬೆಂಗಳೂರು : ನವಗ್ರಹಗಳಲ್ಲಿ ಕೆಲವು ಗ್ರಹಗಳು, ಸ್ನೇಹಿತರಾಗಿದ್ದರೆ, ಇನ್ನು ಕೆಲವು ಶತ್ರುಗಳಾಗಿವೆ. ಹಾಗಾಗಿ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರಲು ಆಯಾ  ಗ್ರಹಗಳಿಗೆ ಸಂಬಂಧಪಟ್ಟ ವಸ್ತುಗಳನ್ನು ಸರಿಯಾಗಿ ಜೋಡಿಸಬೇಕು. ಹಾಗಾದ್ರೆ ಯಾವ ವಸ್ತುಗಳನ್ನು ಜೊತೆಯಾಗಿ ಇಡಬಹದು? ಯಾವ ವಸ್ತುಗಳನ್ನು ಜೊತೆಯಾಗಿ ಇಡಬಾರದು ಎಂಬುದನ್ನು ತಿಳಿದುಕೊಳ್ಳಿ.
ಸೂರ್ಯ ಗ್ರಹಕ್ಕೆ ಚಂದ್ರ, ಮಂಗಳ, ಗುರು ಮತ್ತು ಬುಧ ಗ್ರಹಗಳು ಸ್ನೇಹಿತರಾದರೆ, ಶುಕ್ರ ಮತ್ತು ಶನಿ ಶತ್ರುಗಳೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹಾಗಾಗಿ ಸೂರ್ಯನಿಗೆ ಸಂಬಂಧಪಟ್ಟ ಚಿನ್ನ, ಬೆಲ್ಲ, ರಾಗಿ, ಉಪ್ಪು ಇತ್ಯಾದಿಗಳನ್ನು ಚಂದ್ರ, ಮಂಗಳ, ಗುರು ಗ್ರಹಗಳಿಗೆ ಸಂಬಂಧಿಸಿದ ಬಿಳಿ ವಸ್ತುಗಳಾದ ಅಕ್ಕಿ, ಹಾಲು, ನೀರು, ಬೆಳ್ಳಿ, ಮಸೂರ, ಜೇನುತುಪ್ಪ, ಕೆಂಪು ಮೆಣಸು , ಬೆಂಕಿಗೆ ಅಥವಾ ಹಿತ್ತಾಳೆ, ಅರಶಿನ, ಕೇಸರಿ ಮುಂತಾದ ವಸ್ತುಗಳೊಂದಿಗೆ ಇಡಬಹುದು. ಆದರೆ  ಶುಕ್ರ ಮತ್ತು ಶನಿ ಗ್ರಹಕ್ಕೆ ಸಂಬಂಧಪಟ್ಟ ವಸ್ತುಗಳ ಜೊತೆಗೆ ಇಡಬಾರದು. ಇದರಿಂದ ಅನಗತ್ಯ ಸಮಸ್ಯೆಗಳು ಬಂದು ಕಾಡುತ್ತವೆ.>


ಇದರಲ್ಲಿ ಇನ್ನಷ್ಟು ಓದಿ :