ಬೆಂಗಳೂರು : ಭೂಮಿಗಿಂತಲೂ ಭಾರವಾದದ್ದು ತಾಯಿ, ಅಕಾಶಕ್ಕಿಂತ ಎತ್ತರವಾದವನು ತಂದೆ. ಹತ್ತು ಉಪಾಧ್ಯಾಯರಿಗಿಂತ ಆಚಾರ್ಯರು, ನೂರು ಮಂದಿ ಆಚಾರ್ಯರಿಗಿಂತ ಹೆತ್ತ ತಂದೆ ದೊಡ್ಡವನು, ತಂದೆಗಿಂತಲೂ ಸಾವಿರ ಪಟ್ಟು ದೊಡ್ಡವಳು ಹೆತ್ತತಾಯಿ. ಯಾವುದೇ ಶಾಪಕ್ಕಾದರೂ ಪರಿಹಾರ ಇರುತ್ತದೆ ಆದರೆ ಹೆತ್ತತಾಯಿ ಕಣ್ಣಲ್ಲಿ ಕಣ್ಣೀರು ಬರಿಸಿದ್ದಕ್ಕೆ ಎಷ್ಟೇ ಯಾಗಗಳು ಮಾಡಿದರೂ ಫಲಿತಾಂಶ ಇರಲ್ಲ.