ಅಡುಗೆ ಮನೆಯಲ್ಲಿ ಈ ಫೋಟೊಗಳನ್ನು ಇಟ್ಟರೆ ತುಂಬಾ ಒಳ್ಳೆಯದು

ಬೆಂಗಳೂರು| pavithra| Last Modified ಸೋಮವಾರ, 18 ಜನವರಿ 2021 (09:09 IST)
ಬೆಂಗಳೂರು : ಮನೆಯಲ್ಲಿ ನಮ್ಮ ಆತ್ಮವಿಶ್ವಾಸ, ಸ್ಥೈರ್ಯ ಹೆಚ್ಚಿಸಲು ಮನೆಯಲ್ಲಿ ವಿಧವಿಧವಾದ, ಮನಸ್ಸಿಗೆ ಉಲ್ಲಾಸ ನೀಡುವಂತಹ ಫೋಟೊಗಳಿಂದ ಅಲಂಕರಿಸಬೇಕು. ಹಾಗಾಗಿ ವಾಸ್ತುಶಾಸ್ತ್ರದ ಪ್ರಕಾರ ಅಡುಗೆ ಮನೆಯಲ್ಲಿ ಯಾವ ಫೊಟೊಗಳನ್ನು ಇಟ್ಟರೆ ಉತ್ತಮ ಎಂಬುದನ್ನು ತಿಳಿಯೋಣ.

ಅಡುಗೆ ಮನೆ ಸಾಕ್ಷಾತ್ ಅನ್ನಪೂರ್ಣೇಶ್ವರಿಯ ವಾಸಸ್ಥಳವಾಗಿರುವುದರಿಂದ ಅನ್ನಪೂರ್ಣೇಶ್ವರಿ ದೇವಿಯ ಫೋಟೊ ಹಾಕಿದರೆ ತುಂಬಾ ಒಳ್ಳೆಯದು. ಹಾಗೇ ಹಣ್ಣುಗಳು ಮತ್ತು ತರಕಾರಿ ತುಂಬಿರುವ ಫೋಟೊಗಳನ್ನು ಹಾಕಬೇಕು. ಇದರಿಂದ ಮನೆಯಲ್ಲಿ ಎಂದಿಗೂ ಹಣದ, ದವಸಧಾನ್ಯದ  ಕೊರತೆಯಾಗಲ್ಲ.

ವಾಸ್ತುವಿನ ಪ್ರಕಾರ ನಿಮ್ಮ ಅಡುಗೆ ಮನೆ ಆಗ್ನೇಯ ಅಥವಾ ದಕ್ಷಿಣ ದಿಕ್ಕಿನಲ್ಲಿ ಮಾಡದಿದ್ದರೆ, ಇದರಿಂದ ವಾಸ್ತು ಸಮಸ್ಯೆ ಕಾಡಿದರೆ ಅಡುಗೆ ಕೋಣೆಯಲ್ಲಿ ಹಸಿರು ಮರದ ಕ್ಯಾಬಿನ್ ಸ್ಥಾಪಿಸಬೇಕು.ಇದರಲ್ಲಿ ಇನ್ನಷ್ಟು ಓದಿ :