ಈ ದಿನಾಂಕದಂದು ಹುಟ್ಟಿದವರ ಮೇಲೆ ಶನಿಯ ಕೃಪೆ ಇರುತ್ತದೆಯಂತೆ

ಬೆಂಗಳೂರು| pavithra| Last Modified ಸೋಮವಾರ, 31 ಮೇ 2021 (06:50 IST)
ಬೆಂಗಳೂರು : ಶನಿದೇವನನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಶನಿದೇವನ ಅನುಗ್ರಹ ಯಾರ ಮೇಲಿರುತ್ತದೆಯೋ ಅವರು ಜೀವನದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಹಾಗಾಗಿ ಸಂಖ್ಯಾಶಾಸ್ತ್ರದ ಪ್ರಕಾರ ಈ ದಿನಾಂಕದಂದು ಹುಟ್ಟಿದವರ ಮೇಲೆ ಶನಿಯ ಅನುಗ್ರಹವಿರುತ್ತದೆಯಂತೆ.

ಸಂಖ್ಯಾಶಾಸ್ತ್ರದಲ್ಲಿ ಶನಿ 8ನೇ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಯಾವ ವ್ಯಕ್ತಿಯ ಹುಟ್ಟಿದ ರಾಡಿಕ್ಸ್ ಸಂಖ್ಯೆ 8 ಆಗಿರುತ್ತದೆಯೋ ಅವರ ಮೇಲೆ ಶನಿಯ ಕೃಪೆ ಇರುತ್ತದೆ. ತಿಂಗಳ 8, 17, 26 ರಂದು ಜನಿಸಿದವರ ರಾಡಿಕ್ಸ್ ಸಂಖ್ಯೆ 8 ಆಗಿರುತ್ತದೆ.

ಇವರು ಇಂಜಿನಿಯರ್, ಎಲೆಕ್ಟ್ರಾನಿಕ್ಸ್ ಮತ್ತು ಕಬ್ಬಿಣಕ್ಕೆ ಸಂಬಂಧಪಟ್ಟ ಮಾಡಿದರೆ ಒಳ್ಳೆಯದು. ಇವರು ಯಾವಾಗಲೂ ಏಕಾಂಗಿಯಾಗಿರುತ್ತಾರೆ. ಉತ್ತಮ ಆರ್ಥಿಕ ಸ್ಥಿತಿಯನ್ನು ಹೊಂದಿರುತ್ತಾರೆ. ತುಂಬಾ ಗಂಭೀರ ಹಾಗೂ ಶಾಂತ ಸ್ವಭಾವದವರಾಗಿರುತ್ತಾರೆ. ತಂದೆಯೊಂದಿಗೆ ಹೊಂದಾಣಿಕೆ ಇರುವುದಿಲ್ಲ.

ಇದರಲ್ಲಿ ಇನ್ನಷ್ಟು ಓದಿ :