ಬೆಂಗಳೂರು : ಶನಿ ದೇವರನ್ನು ಪೂರ್ಣವಾಗಿ ತಿಳಿಯದವರು, ಆತನಿಗೆ ಬಹಳ ಹೆದರುತ್ತಾರೆ. ಆದರೆ, ಒಂದು ವೇಳೆ ಶನಿ ಅನುಗ್ರಹಿಸಿದರೆ, ಜೀವನ ಆನಂದಮಯ ವಾಗಿರುತ್ತದೆ. ಒಬ್ಬ ಮನುಷ್ಯನಿಗೆ ಬೇಕಾದಂತಹ ಸಕಲವನ್ನೂ ಶನಿ ಕರುಣಿಸಬಲ್ಲ. ಅದೇ ರೀತಿ ಶನಿ ದೇವರಿಗೆ ಕೋಪ ಬಂತೆಂದರೆ, ಅದನ್ನು ತಡೆದುಕೊಳ್ಳಲಾರ. ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಮನುಷ್ಯ ಎಷ್ಟೇ ಉನ್ನತ ಸ್ಥಾನದಲ್ಲಿದ್ದರೂ ಕಷ್ಟಗಳಲ್ಲಿ ಮುಳಗ ಬೇಕಾಗುತ್ತದೆ. ಇಷ್ಟಕ್ಕೂ ನಾವು ಯಾವ ತಪ್ಪುಗಳನ್ನು ಮಾಡಿದರೆ ಶನಿ ಕ್ಷಮಿಸಲಾರ ಎನ್ನುವುದನ್ನು ತಿಳಿದುಕೊಳ್ಳೋಣ.