ಬೆಂಗಳೂರು : ಕೆಲವರು ನಿದ್ದೆಯಲ್ಲಿ ಹಠಾತ್ತಾಗಿ ಬೆಚ್ಚಿಬಿದ್ದು ಎಚ್ಚರಗೊಳ್ಳುತ್ತಾರೆ. ಅಂತವರಿಗೆ ಶರೀರವನ್ನು ಎತ್ತೆತ್ತಿ ಹಾಕಿದ ಹಾಗೆ ಅನಿಸುತ್ತದೆ. ಹೀಗಾದನಂತರ ನಿದ್ದೆಗೆ ಜಾರಲು 5 ರಿಂದ 10 ನಿಮಿಷ ಹಿಡಿಯುತ್ತದೆ. ಕೆಲವರಿಗೆ ಬೆಚ್ಚಿ ಬೀಳುವಿಕೆಯು ಕನಸು ಬೀಳುವುದರಿಂದ ಉಂಟಾದರೆ,ಇನ್ನು ಕೆಲವರಿಗೆ ಇತರೆ ಕಾರಣಗಳಿಂದ ಉಂಟಾಗುತ್ತದೆ. ಹೀಗೆ ಬಹಳಷ್ಟು ಮಂದಿಗೆ ಆಗುತ್ತಲೇ ಇರುತ್ತದೆ. ಕೆಲವರು ಇದನ್ನು ದೆವ್ವಗಳಿಂದ ಸಂಭವಿಸುವ ತೊಂದರೆ ಎನ್ನುತ್ತಾರೆ. ಆದರೆ ಇದಕ್ಕೆ ನಿಜವಾದ ಕಾರಣವೇನೆಂದು ತಿಳಿಯೋಣ.