ಬೆಂಗಳೂರು : ಮನೆಯಲ್ಲಿ ಊಟ, ಬಟ್ಟೆಗೆ ಕೊರತೆ ಬರಬಾರದು ಎಂದು ಎಲ್ಲರೂ ಬಯಸುತ್ತಾರೆ. ಮನೆಯಲ್ಲಿ ದಾರಿದ್ರ್ಯ ತೊಲಗಬೇಕು ಅಂತ ಅಂದುಕೊಳ್ಳುತ್ತಾರೆ. ಆದರೆ ಅವರಿಗೆ ತಿಳಿಯದ ಹಾಗೆ ಕೆಲವು ದಾರಿದ್ರ್ಯ ತರುವ ಕೆಲಸಗಳನ್ನು ಮಾಡುತ್ತಾರೆ. ಅದೇನೆಂದರೆ ತುಂಬಾ ಹಸಿವಾದಾಗ ಕೆಲವರು ಊಟ ಮಾಡುವಾಗ ಎಲ್ಲೇಂದರಲ್ಲಿ ಕುಳಿತು ಊಟ ಮಾಡುತ್ತಾರೆ. ಅದರಲ್ಲೂ ಕೆಲವರು ಮನೆಯ ಬಾಗಿಲ ಹೊಸ್ತಿಲ ಮಧ್ಯ ಕುಳಿತು ಊಟ ಮಾಡುತ್ತಾರೆ. ಒಟ್ಟಿನಲ್ಲಿ ಅವರಿಗೆ ಹೊಟ್ಟೆ ತುಂಬಿದರೆ ಸಾಕು. ಇದು ಮನೆಗೆ ದಾರಿದ್ರ್ಯ ತರುತ್ತದೆ ಎಂಬುದು ಅವರಿಗೆ ತಿಳಿದಿರುವುದಿಲ್ಲ.