ಬೆಂಗಳೂರು : ಹಿಂದೂ ಪುರಾಣಗಳ ಪ್ರಕಾರ ಲಕ್ಷ್ಮಿದೇವಿ ಧನಕ್ಕೆ, ಐಶ್ವರ್ಯಕ್ಕೆ ಅಧಿಪತಿ. ಆಕೆಯನ್ನು ಪೂಜಿಸಿದರೆ ಎಲ್ಲವೂ ಶುಭವಾಗುತ್ತದೆಂದು, ಹಣ ಹರಿದು ಬರುತ್ತದೆಂದು ಬಹಳಷ್ಟು ಮಂದಿಯ ನಂಬಿಕೆ. ವ್ಯಾಪಾರಿಗಳಾದರೆ ತಮ್ಮ ಅಂಗಡಿಗಳಲ್ಲಿ, ಮಳಿಗೆಗಳಲ್ಲಿ, ಇತರೆ ಪ್ರದೇಶಗಳಲ್ಲಿ ಲಕ್ಷ್ಮಿದೇವಿಯ ಫೋಟೋವನ್ನು ಇಟ್ಟೇ ಇರುತ್ತಾರೆ. ಆ ರೀತಿ ಮಾಡಿದರೆ ವ್ಯಾಪಾರದಲ್ಲಿ ಚೆನ್ನಾಗಿ ಹಣ ಸಂಪಾದಿಸಬಹುದು ಎಂಬುದು ಅವರ ನಂಬಿಕೆ. ಆದರೆ ಲಕ್ಷ್ಮಿ ಅನುಗ್ರಹ ಸಿದ್ದಿಸಬೇಕೆಂದರೆ ಪೂಜೆ ಮಾತ್ರವಲ್ಲ, ಇನ್ನೂ ಕೆಲವು ಕೆಲಸಗಳನ್ನೂ ಮಾಡಬೇಕಾಗಿರುತ್ತವೆ. ಆಗ ಆ ದೇವಿ ಕಟಾಕ್ಷ ಇನ್ನೂ ಹೆಚ್ಚಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಲಕ್ಷ್ಮಿಕಟಾಕ್ಷಕ್ಕಾಗಿ ಏನೇನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳೋಣ.