ಬೆಂಗಳೂರು: ನಮ್ಮಲ್ಲಿ ದಾನಕ್ಕೆ ಬಹಳ ಮಹತ್ವವಿದೆ. ಜೀವನದಲ್ಲಿ ದಾನಕ್ಕಿಂತ ಶ್ರೇಷ್ಠ ಕಾರ್ಯ ಮತ್ತೊಂದಿಲ್ಲಿ ಎಂದು ಹೇಳುತ್ತಾರೆ. ದಾನ ಎನ್ನುವುದು ಸದುದ್ದೇಶದಿಂದ ಕೂಡಿದ್ದು, ಯಾವ ಅಪೇಕ್ಷೆ ಇಲ್ಲದೆ ದಾನ ಮಾಡಬೇಕು. ಅದು ಪುರಾತನ ಕಾಲದಿಂದಲೂ ಮಾಡುತ್ತಾ ಬಂದ ಕಾರ್ಯ. ದಾನ ನೀಡುವುದರಿಂದ ದೇವಾನುದೇವತೆಗಳಿಂದ ನಮಗೆ ಕೃಪೆ,ಕರುಣೆ,ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆ ಇದೆ.