ಬೆಂಗಳೂರು : ಪ್ರತಿಯೊಬ್ಬರಿಗೂ ನೀರಿನ ಅವಶ್ಯಕತೆ ಹೆಚ್ಚಾಗಿರುವುದರಿಂದ ಪ್ರತಿಯೊಬ್ಬರು ಮನೆಯಲ್ಲಿ ಬಾವಿಯನ್ನು ನಿರ್ಮಿಸುತ್ತಾರೆ. ಆದರೆ ಈ ಬಾವಿಯಲ್ಲಿ ಸದಾ ಕಾಲ ನೀರು ಇರಬೇಕೆಂದರೆ ಶಾಸ್ತ್ರದ ಪ್ರಕಾರ ಕೆಲವೊಂದು ನಿಯಮಗಳನ್ನು ಪಾಲಿಸಬೇಕು. ಬಾವಿಯನ್ನು ಮನೆಯ ಉತ್ತರ ಅಥವಾ ಈಶಾನ್ಯ ಭಾಗದಲ್ಲಿ ನಿರ್ಮಿಸಬೇಕು. ಬಾವಿಯು ವಾಯುವ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿರಬಾರದು. ಒಂದು ವೇಳೆ ನೀರಿನ ಪೈಪ್ ಆಗ್ನೇಯ ಅಥವಾ ಈಶಾನ್ಯ ಮೂಲೆಯಲ್ಲಿದ್ದರೆ ಬಾವಿಯು ಅದರ ಎಡ ಅಥವಾ ಬಲಕ್ಕಿದ್ದು ಮಧ್ಯದಲ್ಲಿರಬಾರದು. ಬಾವಿಯು ವೃತ್ತಾಕಾರವಾಗಿರಬೇಕು.