ಬೆಂಗಳೂರು : ಮಕ್ಕಳ ಆರೋಗ್ಯದಲ್ಲಿ ಏರುಪೇರಾದಾಗ ಅಥವಾ ಸದಾ ಅಳ್ತಾ ಇದ್ದರೆ ಮಕ್ಕಳಿಗೆ ದೃಷ್ಟಿ ಬಿದ್ದಿದೆ ಎನ್ನುತ್ತಾರೆ ಹಿರಿಯರು. ಇದೊಂದು ಮೂಢನಂಬಿಕೆ ಅಂತಾ ಕೆಲವರು ನಂಬಿದ್ದಾರೆ. ಆದ್ರೆ ಅದು ತಪ್ಪು. ಈ ದೃಷ್ಟಿ ಬೀಳಲು ವೈಜ್ಞಾನಿಕ ಕಾರಣಗಳು ಕೂಡ ಇವೆ. ವಿಜ್ಞಾನದ ಪ್ರಕಾರ, ದೇಹದಲ್ಲಿ ವಿದ್ಯುತ್ ತರಂಗಗಳಿರುತ್ತವೆ. ಈ ವಿದ್ಯುತ್ ತರಂಗಗಳಿಂದಾಗಿ ಪಾರ್ಶ್ವವಾಯು ಕಾಣಿಸಿಕೊಳ್ಳುವ ಸಾಧ್ಯತೆ ಕೂಡ ಇದೆ. ದೃಷ್ಟಿಗೆ ಹಾಗೂ ವಿದ್ಯುತ್ ತರಂಗಗಳಿಗೆ ನೇರ ಸಂಬಂಧ ಕೂಡ ಇದೆ.