ಬೆಂಗಳೂರು : ಹಿಂದೂಗಳ ಶಾಸ್ತ್ರದಲ್ಲಿಒಬ್ಬ ವ್ಯಕ್ತಿ ಸತ್ತ ನಂತರ ಆ ವ್ಯಕ್ತಿಯ ಮೃತದೇಹಕ್ಕೆ ಸ್ನಾನ ಮಾಡಿಸುವುದು, ಅಲಂಕರಿಸುವುದು, ಶವಯಾತ್ರೆ ಮಾಡುವುದು, ದಹನ ಮಾಡುವ ಕ್ರಿಯೆಗಳು ನಡೆಯುತ್ತವೆ. ಆದರೆ ಇವೆಲ್ಲಕ್ಕಿಂತಲೂ ಮೊದಲು ವ್ಯಕ್ತಿ ಸತ್ತ ಕೂಡಲೆ ಆತನ ಕಾಲಿನ ಹೆಬ್ಬೆರಳುಗಳೆರಡನ್ನು ಸೇರಿಸಿ ಚಿಕ್ಕ ಹಗ್ಗದಿಂದ ಕಟ್ಟುತ್ತಾರೆ. ಆ ಬಳಿಕ ದಹನ ನಡೆಯುವವರೆಗೂ ಆ ದಾರ ಹಾಗೆಯೇ ಇರುತ್ತದೆ. ದಹನ ಕ್ರಿಯೆಯಲ್ಲಿ ಮೃತದೇಹದ ಜತೆಗೆ ಸುಟ್ಟುಹೋಗುತ್ತದೆ. ಆದರೆ ಆ ರೀತಿ ಹಗ್ಗ ಅಥವಾ ಬಳ್ಳಿಯಿಂದ ಕಾಲಿನ ಹೆಬ್ಬೆರಳುಗಳನ್ನು ಯಾಕೆ ಕಟ್ಟುತ್ತಾರೆ ಗೊತ್ತಾ.