ಬೆಂಗಳೂರು: ಹಿಂದೂ ಸಂಪ್ರದಾಯದಲ್ಲಿ ಪೂಜೆ ಹಾಗು ಇತರ ಶುಭ ಕಾರ್ಯಗಳನ್ನು ಮಾಡಬೇಕೆಂದರೆ ತೆಂಗಿನಕಾಯಿ ಇರಲೇ ಬೇಕು. ತೆಂಗಿನಕಾಯಿ ಇಲ್ಲದೆ ಯಾವ ದೇವಸ್ಥಾನದಲ್ಲೂ ಹಣ್ಣುಕಾಯಿ ಸೇವೆ ಪೂರ್ಣವಾಗುವುದಿಲ್ಲ. ಈ ತೆಂಗಿನಕಾಯಿ ಒಡೆಯಲು ಕೆಲವು ನಿಯಮಗಳಿವೆ. ತೆಂಗಿನಕಾಯಿ ಒಡೆಯುವ ಮೊದಲು ಅದನ್ನು ಚೆನ್ನಾಗಿ ನೀರಿನಲ್ಲಿ ತೊಳೆಯಬೇಕು. ಆಮೇಲೆ ಕೈಯಲ್ಲಿ ಹಿಡಿದು ದೇವರನ್ನು ಸ್ಮರಿಸಬೆಕು. ತೆಂಗಿನಕಾಯಿಯನ್ನು ಯಾವಾಗಲೂ ಆಗ್ನೇಯ ದಿಕ್ಕಿನಲ್ಲಿ ಒಡೆಯಬೇಕು. ಅದು ಸಮವಾಗಿ ಎರಡು ಭಾಗವಾಗಬೇಕು. ಒಂದುವೇಳೆ ಸ್ವಲ್ಪ ಹೆಚ್ಚು ಕಡಿಮೆಯಾದರೆ ಆಶುಭವೆಂದು