ಸ್ವರ್ಗ ಪ್ರಾಪ್ತಿಯಾಗಬೇಕೆ…? ಹಾಗಾದ್ರೆ ನೀವು ಈ ಮೂರು ಋಣ ತೀರಿಸಲೇ ಬೇಕು

ಬೆಂಗಳೂರು| pavithra| Last Modified ಶುಕ್ರವಾರ, 5 ಜನವರಿ 2018 (11:44 IST)
ಬೆಂಗಳೂರು : ನಮ್ಮ ಹಿಂದೂ ಸಂಪ್ರದಾಯದಲ್ಲಿ ಎಷ್ಟೋ


ಮೊದಲನೇಯದಾಗಿ ದೈವ ಋಣ - ಮನುಷ್ಯ ತನ್ನ ಜೀವನದಲ್ಲಿ ದಾನ, ಧರ್ಮ ಮಾಡುತ್ತಾ ಇದ್ದರೆ ಈ ದೈವ ಋಣ ತೀರಿಸಿದಂತಾಗುತ್ತದೆ. ಆದರೆ ದಾನ, ಧರ್ಮ ಮಾಡಲು ಸಾಮರ್ಥ್ಯವಿಲ್ಲದವರು ಜನರ ಸೇವೆ ಹಾಗು ದೇವರ ಸೇವೆ ಮಾಡಿದರೂ ಸಾಕು ಅಂತವರಿಗೂ ಸ್ವರ್ಗಲಭಿಸುತ್ತದೆ. ಒಂದುವೇಳೆ ಅವರು ಹೀಗೆ ಮಾಡದೆ ಹೊಂದಿದ್ದರೆ, ಅವರ ಮನೆಯವರು ಅವರ ಹೆಸರಲ್ಲಿ ದಾನ, ಧರ್ಮ ಮಾಡಿದರೆ ಅವರಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ.


ಎರಡನೇಯದಾಗಿ ಋಷಿ ಋಣ – ಮನುಷ್ಯರು ತನ್ನ ಜೀವನದಲ್ಲಿ ಸಂಪಾದಿಸಿದ ಜ್ಞಾನವನ್ನು ಬೇರೆಯವರಿಗೆ ಕಲಿಸಿಕೊಟ್ಟರೆ
ಈ ಋಷಿ ಋಣ ತೀರಿ ಸ್ವರ್ಗದ ಬಾಗಿಲು ತೆರೆಯುತ್ತದೆ.


ಮೂರನೇಯದಾಗಿ ಪಿತೃ ಋಣ – ಪಿತೃ ಋಣ ತೀರಬೇಕೆಂದರೆ ನಿಮ್ಮ ಪೂರ್ವಿಕರಿಗೆ ಶ್ರಾದ್ಧ ಕರ್ಮ ಮಾಡಿ ತರ್ಪಣ, ಪಿಂಡ ಪ್ರದಾನ ಮಾಡಬೇಕು. ಇದರಿಂದ ಪಿತೃಋಣ ತೀರಿ ಸ್ವರ್ಗ ಲಭಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ

ಮೊಬೈಲ್ ಆ್ಯಪ್

ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :