ಬೆಂಗಳೂರು : ಕೆಲವು ಮಕ್ಕಳಿಗೆ ಮರೆವಿನ ಸಮಸ್ಯೆ ಇರುತ್ತದೆ. ಇದರಿಂದ ಅವರಿಗೆ ಏನೇ ಕಲಿತರು ಅದು ನೆನಪಲ್ಲಿ ಉಳಿಯೋದಿಲ್ಲ. ಪರೀಕ್ಷೆಯಲ್ಲಿಯೂ ಕೂಡ ಉತ್ತಮ ಅಂಕ ಗಳಿಸಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆಗೆ ಉತ್ತಮ ಪರಿಹಾರವೆಂದರೆ ಅದು ಗಣೇಶ ರುದ್ರಾಕ್ಷಿ ಧರಿಸುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕ್ಕಳ ಜಾತಕದಲ್ಲಿ ಬುಧಗ್ರಹ ದೋಷವಿದ್ದರೆ ಈ ಸಮಸ್ಯೆ ಕಾಡುತ್ತದೆಯಂತೆ. ಆದ್ದರಿಂದ ಮಕ್ಕಳ ಮೇಲೆ ಬುಧಗ್ರಹ ಅನುಗ್ರಹವಿರಬೇಕು. ಗಣೇಶ ರುದ್ರಾಕ್ಷಿ ಮಾಲೆಯನ್ನು ಧರಿಸಿದ್ರೆ ಬುಧಗ್ರಹ ಅನುಗ್ರಹ ದೊರೆಯುತ್ತದೆ.