ಬೆಂಗಳೂರು : ಕುಂಕುಮ ಹಚ್ಚಿಕೊಳ್ಳುವುದು ಹಿಂದೂಗಳಲ್ಲಿ ಒಂದು ಮುಖ್ಯವಾದ ಸಂಪ್ರದಾಯ. ಮಹಿಳೆಯರು ತಮ್ಮ ಗಂಡನ ಕ್ಷೇಮ, ಸುಖಕ್ಕಾಗಿ ಕುಂಕುಮ ಇಡುತ್ತಾರೆ. ಭಕ್ತರು ದೇವರಿಗೆ ಪೂಜೆ ಮಾಡುವಾಗ, ದರ್ಶನ ಪಡೆದ ಮೇಲೆ ಕುಂಕುಮ ಇಟ್ಟುಕೊಳ್ಳುತ್ತಾರೆ. ಕೆಲವು ಸಂದರ್ಭಗಳಲ್ಲಿ ಹಿರಿಯರು ಆರ್ಶೀರ್ವಾದ ಮಾಡುವಾಗ ಕುಂಕುಮವಿಡುವುದು ವಾಡಿಕೆ. ಹಾಗೆ ಕುಂಕುಮವನ್ನು ಯಾವ ಬೆರಳಲ್ಲಿಇಟ್ಟರೆ ಏನು ಫಲ ಸಿಗುತ್ತದೆ ಎಂದು ಮೊದಲು ತಿಳಿದುಕೊಳ್ಳಿ.