ಬೆಂಗಳೂರು: ಕೆಲಸ ಸರಿಯಾಗಿ ಆಗದಿದ್ದರೆ ಅಥವಾ ಹಾಕಿಕೊಂಡ ಯೋಜನೆಗಳು ನೇರವೆರದಿದ್ದರೆ ಬೆಳಿಗ್ಗೆ ಯಾರ ಮುಖ ನೋಡಿದೆನೋ ಎಂದು ಗೊಣಗುತ್ತಾರೆ. ಕೆಲವರು ಎದ್ದ ತಕ್ಷಣ ದೇವರ ಪೋಟೋ ಅಥವಾ ತಮಗಿಷ್ಟವಾದವರ ಮುಖ ನೋಡುತ್ತಾರೆ. ಪುರಾಣಗಳಲ್ಲಿ ಬೆಳಿಗ್ಗೆ ಎದ್ದ ತಕ್ಷಣ ಏನನ್ನು ನೋಡಬೇಕು ಏನನ್ನು ನೋಡಬಾರದು ಎಂದು ತಿಳಿಸಲಾಗಿದೆ.