ಬೆಂಗಳೂರು : ನಾವು ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗಾಗಿ ಚಿನ್ನವನ್ನು ಖರೀದಿಸುತ್ತೇವೆ. ಆದರೆ ಆಭರಣ ಖರೀದಿ ಮಾಡುವಾಗ ಮುಹೂರ್ತ ನೋಡುವುದು ಉತ್ತಮ. ಏಕೆಂದರೆ ಲಕ್ಷ್ಮೀ ಸ್ವರೂಪವಾದ ಚಿನ್ನವನ್ನು ಮನೆಗೆ ಉತ್ತಮ ಮುಹೂರ್ತದಲ್ಲಿ ತಂದರೆ ಆ ಮನೆಯಲ್ಲಿ ಅಭಿವೃದ್ಧಿ ಆಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಚಿನ್ನದ ಆಭರಣ ಖರೀದಿಗೆ ಸೂಕ್ತ ಕಾಲ ಯಾವುದು, ಯಾವ ಸಮಯದಲ್ಲಿ ಖರೀದಿಸಬಾರದು ಎಂಬ ಮಾಹಿತಿ ಇಲ್ಲಿದೆ ನೋಡಿ