ಬೆಂಗಳೂರು : ಆಷಾಢ ಮಾಸದಲ್ಲಿ ಹೊಸ ಜೋಡಿ ಅಥವಾ ನವದಂಪತಿಗಳು ಸಂಸಾರ ನಡೆಸಬಾರದು ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆ ಆಚಾರ ಈಗಲೂ ಕೂಡ ಕೆಲವುಕಡೆ ಆಚರಣೆಯಲ್ಲಿದೆ. ಇದರ ಹಿಂದೆ ಒಂದು ಮುಖ್ಯವಾದ ಕಾರಣವಿದೆ. ಆಷಾಢ ಮಾಸದಲ್ಲಿ ವಾತಾವರಣದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತವೆ. ತಣ್ಣಗಿನ ವಾತಾವರಣದ ಕಾರಣ ಬ್ಯಾಕ್ಟೀರಿಯಾ, ವೈರಸ್ಗಳಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ. ಇದನ್ನು ಅನಾರೋಗ್ಯ ಮಾಸ ಎಂದೂ ಕರೆಯುತ್ತಾರೆ. ಗಾಳಿಯ ಜತೆಗೆ ಮಳೆಯೂ ಸುರಿಯುತ್ತಿರುತ್ತದೆ. ಕಾಲುವೆಗಳಲ್ಲಿ, ನದಿಗಳಲ್ಲಿ ಪ್ರವಹಿಸುವ