ಬೆಂಗಳೂರು : ಶಿವನು ವೈರಾಗಿ. ಆದರೆ ಅವನು ಭಕ್ತರು ಬೇಡಿಕೆಗಳನ್ನು ಹಾಗೂ ಭಕ್ತರ ಕಷ್ಟಗಳನ್ನು ನೀಗಿಸುವವನು ಎಂದು ಹೇಳುತ್ತಾರೆ. ಆದ್ದರಿಂದ ಶಿವನು ಬೇಗ ಪ್ರಸನ್ನನಾಗಲು ಅವನನ್ನು ಈ ಬಣ್ಣದ ವಸ್ತುಗಳಿಂದ ಪೂಜಿಸಬೇಕಂತೆ. ಹೌದು. ಶ್ವೇತ ಬಣ್ಣ ವೈರಾಗ್ಯ ಅಂದರೆ ನಿಷ್ಕಾಮ ಸಾಧನೆಯ ದ್ಯೋತಕವಾಗಿದೆ. ಶಿವನು ವೈರಾಗಿಯಾಗಿರುವುದರಿಂದ ಅವನಿಗೆ ಶ್ವೇತ ಬಣ್ಣವೆಂದರೆ ಬಹಳ ಇಷ್ಟವಂತೆ. ಆದ್ದರಿಂದ ಶಿವನನ್ನು ಬಿಳಿ ಬಣ್ಣದ ವಸ್ತುಗಳಿಂದ ಪೂಜಿಸಬೇಕಂತೆ. ಶಿವನಪೂಜೆ ಮಾಡುವಾಗ ಶ್ವೇತ ಬಣ್ಣದ ಬಟ್ಟಗಳನ್ನು ಧರಿಸಬೇಕಂತೆ.