ಗುರು ಸ್ಥಾನಪಲ್ಲಟ: ಮೀನರಾಶಿ ಫಲಾಫಲಗಳು

WD
ನೆಮ್ಮದಿಯನ್ನು ಬಯಸುವ ನೀವು ಯಾವುದೇ ಬಗೆಯ ಗದ್ದಲವಿಲ್ಲದೇ ಎಲ್ಲವನ್ನೂ ಸಾಧಿಸುತ್ತೀರಿ. ಮರೆಯಲ್ಲಿ ಚಿಂತನೆ ಮಾಡಿ ನೇರವಾಗಿ ಕಾರ್ಯೋನ್ಮುಖರಾಗುವ ನೀವು ಯಾರಿಗೂ ಕೆಡುಕನ್ನು ಬಯಸುವವರಲ್ಲ. ಒಳ್ಳೆಯ ಮಾರ್ಗದಲ್ಲಿಯೇ ವಿವೇಚನೆಯಿಂದ ನಡೆಯುತ್ತೀರಿ. ನೀವು ಸುಖವಾಗಿದ್ದು ನೆರೆಯವರೂ ಸುಖವಾಗಿರಬೇಕೆಂದು ಬಯಸುವವರು ನೀವು. ಸಮಾಜಸೇವೆಯಲ್ಲಿ ಸುಖವನ್ನು ಹುಡುಕುತ್ತೀರಿ. ಯಾರ ಹಂಗೂ ಇಲ್ಲದೇ ಒಂಟಿಯಾಗಿ ಹೋರಾಡಿ ಗೆಲ್ಲುವ ಸಾಮರ್ಥ್ಯ ನಿಮಗಿದೆ. ಎಲ್ಲದರಲ್ಲಿಯೂ ಹೊಸತನವನ್ನು ಕಾಣಲು ಬಯಸುತ್ತೀರಿ. ಆಗಾಗ್ಗೆ ತೀವ್ರವಾದ ಚಿಂತನೆಯಲ್ಲಿ ಮುಳುಗಿರುತ್ತೀರಿ.ಮನಸ್ಸಾಕ್ಷಿಗೆ ವಿರುದ್ದವಾಗಿ ಎಂದಿಗೂ ನಡೆಯುವುದಿಲ್ಲ. ಹಣಬಂದರೂ ಸಂಸ್ಕಾರವನ್ನು ಬದಿಗೆ ನೂಕುವವರಲ್ಲ ನೀವು.

ಇದುವರೆಗೂ ನಿಮ್ಮ ರಾಶಿಯ 9 ನೇ ಸ್ಥಾನದಲ್ಲಿದ್ದು ಸಾಕಷ್ಟು ಅನುಕೂಲಗಳನ್ನು ಕಲ್ಪಿಸಿರುವ ಗುರು ಭಗವಾನ್ ಈಗ 10ನೇ ಮನೆಗೆ ಕಾಲಿಡುವುದರಿಂದ ನೀವಿನ್ನು ಮುಂದೆ ಜಾಗರೂಕತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಮನಬಿಚ್ಚಿ ಮಾತನಾಡಲು ಸಹ ಹಿಂತೆಗೆಯುತ್ತಿದ್ದ ನೀವು ಈಗ ಧಾರಾಳವಾಗಿ ಅದಕ್ಕಾಗಿ ಸಮಯವನ್ನು ವ್ಯಯಮಾಡುವಂತಾಗುತ್ತದೆ. ಮಡದಿ ಮತ್ತು ಗಂಡ ಅನ್ಯೋನ್ಯವಾಗಿರುತ್ತಾರೆ. ನಿಮ್ಮಿಬ್ಬರ ಮಧ್ಯೆ ಮನಸ್ತಾಪವುಂಟು ಮಾಡಿದವರನ್ನು ನೀವು ಹೊರಹಾಕುತ್ತೀರಿ.

ಹಳೆಯ ಬಾಕಿಗಳೆಲ್ಲವೂ ತೀರಿಸಿ ಉಳಿತಾಯವನ್ನು ಸಹ ಮಾಡುತ್ತೀರಿ. ಬೆಲೆಬಾಳುವ ವಸ್ತುಗಳನ್ನು ಜಾಗರೂಕತೆಯಿಂದ ಕೈಯಾಡಿಸಿ. ಎಂದಿನಂತೆ ಎಲ್ಲವನ್ನೂ ಬಿಚ್ಚುಮನಸ್ಸಿನಲ್ಲಿ ಮಾತನಾಡಲು ಸರಿಯಲ್ಲ. ಅಕ್ಕಪಕ್ಕದವರ ವ್ಯವಹಾರದಲ್ಲಿ ತಲೆಯಿಡಲು ಪ್ರಯತ್ನಿಸಬೇಡಿ. ಬಂಧುಬಳಗದವರಲ್ಲಿ ಒಂದು ಅಂತಸ್ತು ಹೆಚ್ಚಾಗಿರಲು ನೀವು ಆಶೆಪಡುತ್ತೀದ್ದಿರಿ. ಅದು ಈಗ ಈಡೇರುತ್ತದೆ. ಸಂತಾನವಿಲ್ಲದವರಿಗೆ ಆ ಭಾಗ್ಯವೂ ದೊರೆಯುತ್ತದೆ.

ಮಕ್ಕಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಾರೆಂದು ವ್ಯಥೆ ಪಡುತ್ತಿದ್ದೀರಲ್ಲವೇ? ಉಳಿದ ಮಕ್ಕಳಂತೆ ನಮ್ಮ ಮಗನೂ ಮುಂಚೂಣಿಯಲ್ಲಿಲ್ಲವೆ ಎಂದು ತವಕಗೊಂಡಿದ್ದೀರಿ. ಇನ್ನುಮುಂದೆ ಅವೆಲ್ಲವೂ ನನಸಾಗುತ್ತದೆ. ನಿಮ್ಮ ಮಗನಿಗೆ ವಿದೇಶದಲ್ಲಿ ನೌಕರಿ ದೊರೆಯುತ್ತದೆ. ಮಗಳ ಮದುವೆ ವಿಜೃಂಭಣೆಯಿಂದ ನಡೆಸುತ್ತೀರಿ. ಒಡಹುಟ್ಟಿದವರನ್ನು ಮುನ್ನಡೆಸಲು ಅನೇಕ ರೀತಿಯಲ್ಲಿ ಶ್ರಮಪಟ್ಟಿದ್ದೀರಿ. ಅದಕ್ಕೆ ಈಗ ಸಕಾಲ. ಅವರೆಲ್ಲರೂ ನಿಮ್ಮ ತ್ಯಾಗ ಬುದ್ದಿಯನ್ನು ಕೊಂಡಾಡುತ್ತಾರೆ.

ಪಿತ್ರಾರ್ಜಿತ ಸ್ವತ್ತಿನ ಬಗೆಗಿದ್ದ ಸಮಸ್ಯೆ ಸುಗಮವಾಗಿ ಪರಿಹಾರವಾಗುತ್ತದೆ. ಮಾತಿನಲ್ಲಿ ಹೆಚ್ಚು ಗಾಂಭೀರ್ಯ ಪಡೆಯುತ್ತೀರಿ. ನಿಮ್ಮ ಬಗ್ಗೆ ಕಟುಟೀಕೆ ಕಂಡುಬರುತ್ತದೆ. ಯಾರಿಗೂ ಸಾಕ್ಷಿ ಹಾಕಬೇಡಿ. ನೀವು ಹೇಳದ ಮಾತುಗಳೆಲ್ಲವನ್ನೂ ಹೇಳಿದ್ದಾರೆಂಬ ಅಪವಾದ ಬರುತ್ತದೆ.ಅದಕ್ಕಾಗಿ ನೀವು ಕಳವಳ ಪಡಬೇಕಾಗಿಲ್ಲ. ಪ್ರಮುಖರ ಸಂಪರ್ಕವುಂಟಾಗುತ್ತದೆ. ಅವರಿಂದ ಸರಿಯಾದ ಸಂದರ್ಭದಲ್ಲಿ ಸಹಾಯ ಪಡೆಯುತ್ತೀರಿ. ಈಡೇರದ ಅನೇಕ ಅಭಿಲಾಷೆಗಳು ಈಗ ಈಡೇರುತ್ತವೆ. ನಿಮ್ಮ ಸುತ್ತ ಯಾರು ಒಳ್ಳೆಯವರು ಎಂದು ಅರ್ಥವಾಗುತ್ತದೆ.

ತಂದೆ-ತಾಯಿಯ ಆಶೆಯನ್ನು ಈಡೇರಿಸುತ್ತೀರಿ. ಕುಲದೈವ ಆರಾಧನೆ ತಡವಾಗಿಯಾದರೂ ಈಗ ನೆರವೇರುತ್ತದೆ. ದೂರವಾಗಿದ್ದವರೆಲ್ಲಾ ಈಗ ಹತ್ತಿರ ಬರುತ್ತಾರೆ. ವರಮಾನ ತೆರಿಗೆಯನ್ನು ತಡಮಾಡದೇ ಪಾವತಿ ಮಾಡಿ. ನ್ಯಾಯಾಲಯ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ವಿದೇಶ ಪ್ರಯಾಣದ ಅವಕಾಶವಿದೆ. ಸಮಾಜಸೇವೆಯಲ್ಲಿ ವಿಶೇಷ ಆಸಕ್ತಿ ಮೂಡುತ್ತದೆ. ನೆರೆಹೊರೆಯವರೊಡನೆ ಇದ್ದ ಮನಸ್ತಾಪ ದೂರವಾಗುತ್ತದೆ.

ವ್ಯಾಪಾರದಲ್ಲಿ ನಿಮ್ಮದೇ ತೀರ್ಮಾನವಾಗಲಿ, ಬೇರೆಯವರ ತೀರ್ಮಾನವಾಗಲಿ ಮತ್ತೆ ಮತ್ತೆ ಯೋಚಿಸಿ ತೀರ್ಮಾನ ತೆಗೆದುಕೊಳ್ಳುವುದು ಶ್ರೇಯಸ್ಕರ. ಹೊಸಬಗೆಯ ಉಪಾಯಗಳ ಮೂಲಕ ಗಿರಾಕಿಗಳನ್ನು ಆಕರ್ಷಿಸುತ್ತೀರಿ. ಬಾಕಿ ಎಲ್ಲವೂ ಸಲೀಸಾಗಿ ವಸೂಲಾಗುತ್ತದೆ.

ನೌಕರಿಯಲ್ಲಿ ನಿಮಗೆ ಅನೇಕ ಶೋಧನೆಗಳು ಎದುರಾದುವಲ್ಲವೇ? ತಾನೇ ತಾನಾಗಿ ಬರಬೇಕಾಗಿದ್ದ ಸಂಬಳದ ಹೆಚ್ಚುವರಿ ಸಹ ನಿಮಗೆ ಪಾವತಿಯಾಗಲಿಲ್ಲ. ಆ ಎಲ್ಲಾ ಸನ್ನಿವೇಶ ಈಗ ಬದಲಾಗುತ್ತದೆ. ಸಂಬಳದ ಏರುವಿಕೆಯ ಜತೆಗೆ ಪದವಿಯ ಉನ್ನತಿಯೂ ನಿಮಗೆ ಲಭಿಸುತ್ತದೆ. ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ಪಡೆದಿದ್ದ ಸಹೋದ್ಯೋಗಿಗಳು ಇನ್ನು ಮುಂದೆ ಅವರ ತಪ್ಪನ್ನು ಅರ್ಥಮಾಡಿಕೊಂಡು ನಿಮ್ಮೊಂದಿಗೆ ಸುಗಮವಾಗಿರುತ್ತಾರೆ. ಕಣ್ಣುರಿ, ಕತ್ತಿನ ನೋವು ಮುಂತಾದವು ವಾಸಿಯಾಗುತ್ತವೆ. ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಸುಗಮವಾಗಿ ನಡೆಯುತ್ತವೆ.

ಕನ್ಯಾಮಣಿಗಳಿಗೆ ದೇಹಾರೋಗ್ಯ ಚೆನ್ನಾಗಿರುತ್ತದೆ. ತಾಯಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬಂದು ಪರಿಹಾರವಾಗುವುದು. ಪ್ರಣಯ ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ. ಹೊಸ ಉದ್ಯೋಗ ದೊರೆಯುತ್ತದೆ. ತಂದೆ-ತಾಯಿಯ ಒಪ್ಪಿಗೆಯಿಲ್ಲದೇ ಯಾವುದೇ ತೀರ್ಮಾನ ಬೇಡ. ಉದರಶೂಲೆ,ನಿದ್ರಾಭಂಗವಿದ್ದರೂ ವಿದ್ಯಾರ್ಥಿಗಳು ಪ್ರಾತಃಕಾಲವೇ ಎದ್ದು ಅಧ್ಯಯನದಲ್ಲಿ ತೊಡಗುತ್ತೀರಿ. ಅಧ್ಯಾಪಕರ ಒಲವನ್ನು ಸಂಪಾದನೆ ಮಾಡುತ್ತೀರಿ. ದುಷ್ಟ ಸ್ನೇಹಿತರ ಸಂಪರ್ಕವೇರ್ಪಡುತ್ತದೆ. ಜಾಗರೂಕತೆಯಿಂದ ಒಡನಾಡುವುದು ಒಳ್ಳೆಯದು. ಕ್ರೀಡೆ,ಕವಿತೆ,ಸಾಹಿತ್ಯ ಮುಂತಾದವುಗಳಲ್ಲಿ ಜಯಗಳಿಸುತ್ತೀರಿ.

ಕಲೆಯಲ್ಲಿ ತೊಡಗಿರುವವರು ಸಂಬಳದ ವಿಷಯದಲ್ಲಿ ಸ್ವಲ್ಪ ಮಟ್ಟಿಗೆ ಕರಾರುವಾಕ್ಕಾಗಿರುವುದು ಒಳ್ಳೆಯದು. ಹಿರಿಯ ಕಲಾವಿದರ ಬಗೆಗೆ ಟೀಕೆ ಮಾಡಬೇಡಿ. ಆಗಾಗ್ಗೆ ಅನಗತ್ಯ ವದಂತಿಗಳು ಬರುತ್ತವೆ. ಅನೀರೀಕ್ಷಿತ ಅವಕಾಶಗಳು ದೊರೆಯುತ್ತವೆ.

ಈ ಗುರು ಸ್ಥಾನಪಲ್ಲಟ ನಿಮ್ಮ ಬಲಾಬಲವನ್ನು ತಿಳಿಯಪಡಿಸುವುದು ಮಾತ್ರವಲ್ಲದೇ ಸುತ್ತಲಿನವರ ಬಗೆಗೆ ಆಂತರಿಕವಾಗಿ ತಿಳಿಯಲು ಸಹಾಯಕವಾಗುತ್ತದೆ.

ಪರಿಹಾರ: ಕಾಂಚೀಪುರದ ಸಮೀಪವಿರುವ ತಕ್ಕೋಲಮ್‌ನಲ್ಲಿರುವ ಶಿವಾಲಯವನ್ನು ಸಂದರ್ಶಿಸಿ ಪೂಜಿಸಿ. ಅಪಾರ ಜ್ಯೋತಿ ಸ್ವರೂಪ ದಕ್ಷಿಣಾಮೂರ್ತಿಯನ್ನು ಪುಬ್ಬಾ ನಕ್ಷತ್ರ ನಡೆಯುವ ದಿನದಂದು ಆರಾಧನೆ ಮಾಡಿ. ಅನಾಥ ಮುದುಕರಿಗೆ ಸಹಾಯಮಾಡಿ. ಬಡವಿದ್ಯಾರ್ಥಿಗಳಿಗೆ ನೋಟ್‌ಬುಕ್ ಮುಂತಾದವುಗಳನ್ನು ದಾನಮಾಡಿ. ಸಮೃದ್ಧಿಯಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...

ನಿಮ್ಮ ಬೆರಳಲ್ಲಿ ಶಂಖ, ಚಕ್ರ, ಕಳಶ! ಯಾವುದಿದೆ?

ಭಾರತೀಯ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಬೆರಳುಗಳಲ್ಲಿ ಚಕ್ರ, ಶಂಖ, ಕಳಶ, ಶೀಪ ಆಕಾರದ ...

ಶುಭ ಮುಹೂರ್ತಕ್ಕಾಗಿ 'ಚೌಘಡಿಯಾ'

ಪ್ರತಿಯೊಂದು ಕಾರ್ಯ ಆರಂಭಿಸುವ ಮುನ್ನ, ಅದರ ಸಾಫಲ್ಯಕ್ಕಾಗಿ ಶುಭ ಮುಹೂರ್ತ ನೋಡುವುದು ಭಾರತೀಯ ...