ಗುರು ಸ್ಧಾನಪಲ್ಲಟ: ಸಿಂಹ ರಾಶಿ ಫಲಾಫಲ

WD
ಮುಗುಳ್ನಗೆಯೊಂದಿಗೆ ಎಲ್ಲರನ್ನೂ ಆಕರ್ಷಿಸುವವರೇ! ಏಕಕಾಲದಲ್ಲಿ ಹಲವಾರು ಕೆಲಸಗಳನ್ನು ನಿರ್ವಹಿಸುವ ಸಾಮರ್ಥ್ಯವುಳ್ಳವರೇ! ತುಂಬೆ ಹೂವಿನಂತೆ ನಿರ್ಮಲವಾದ ಉಡುಪನ್ನು ಧರಿಸುವವರೇ! ನಿಮ್ಮ ಮನಸ್ಸು ಸಹ ಹಾಗೆಯೇ ನಿರ್ಮಲವಾಗಿದೆ. ಎಲ್ಲರೊಂದಿಗೆ ಮನಬಿಚ್ಚಿ ಮಾತನಾಡುವ ನೀವು ಇತರರ ಅಂತರಂಗದ ವಿಷಯಗಳಲ್ಲಿ ಎಂದಿಗೂ ತಲೆಹಾಕುವುದಿಲ್ಲ. ಹೋರಾಟ ಮತ್ತು ಹೊಸತನವನ್ನು ಬಯಸುವ ನೀವು ಹಿರಿಯರನ್ನು ಗೌರವದಿಂದ ಕಾಣಲು ಎಂದೂ ಮರೆಯುವುದಿಲ್ಲ.

ಯಾರು ಏನನ್ನೇ ಕೇಳಲಿ ಯೂವ ಸಮಯದಲ್ಲಾದರೂ ಸರಿಯೇ ಧಾರಾಳವಾಗಿ ಮನಸಾರೆ ದಾನಮಾಡಿದ ದೂನಶೂರ ಕರ್ಣನನ್ನು ಈ ಜಗತ್ತಿಗೆ ನೀಡಿದ ಸೂರ್ಯ ಭಗವಾನನ ರಾಶಿಯಲ್ಲಿ ಜನಿಸಿದವರು ನೀವು. ಮಾತಾ,ಪಿತಾ,ಗುರು,ದೈವವನ್ನು ಗೌರವಿಸುವವರು ನೀವು. ಮಂಗಳನನ್ನು ಯೋಗಾಧಿಪತಿಯಾಗಿರಿಸಿಕೊಂಡ ನೀವು ಶೌರ್ಯದೊಂದಿಗೆ ವಿವೇಕವನ್ನು ಕಾಪಾಡಿಕೊಂಡಿರುತ್ತೀರಿ.ಮಹಡಿಯಲ್ಲಿ ವಾಸಮಾಡಿದರೂ ಗುಡಿಸಲುವಾಸಿಗಳ ಬಗೆಗೆ ಅನುಕಂಪವುಳ್ಳವರು ನೀವು.ಬರಹಗಾರರೂ,ಅನುಭವಶಾಲಿಗಳೂ ಆಗಿರುವ ನೀವು ತುಂಬಿದ ಕೊಡ.

ಇದುವರೆಗೆ ನಿಮ್ಮ ರಾಶಿಗೆ ನಾಲ್ಕನೇ ಸ್ಥಾನದಲ್ಲಿದ್ದು ಬಗೆಬಗೆಯ ಹಿಂಸೆಗಳನ್ನು ಕೊಡುತ್ತಿದ್ದ ಗುರು ಭಗವಾನ್ ಜೀವನಕ್ಕೆ ಅಡಿಪಾಯ ಹಾಕುವಂತಹ ವಿಶೇಷ ಸ್ಧಾನವಾದ ಐದನೇ ಸ್ಥಾನಕ್ಕೆ ಅಡಿಯಿಡುತ್ತಾನೆ.ಈ ಸ್ಧಾನದಲ್ಲಿ ಎಲ್ಲಾ ರೀತಿಯ ಅನುಕೂಲಗಳನ್ನುಗುರು ದಯಪಾಲಿಸುತ್ತಾನೆ.

ಕುಟುಂಬವೇ ಎರಡು ಹೋಳಾಯಿತೇ?ಎಲ್ಲಿ ಹೋದರೂ ಸೋಲುವುದೇ? ಒಂದು ಕಾಸೂ ಕೈಯಲ್ಲಿಲ್ಲದೇ ಬಂದದ್ದೆಲ್ಲಾ ಖರ್ಚಾಯಿತೇ?ಕಾಲುನೋವು, ಬೆನ್ನುನೋವು,ಹೃದಯಶೂಲೆ ಎಂದು ಮುಂತಾಗಿ ವಯಸ್ಸಾದವರಂತೆ ಹೆಣಗಾಡುತ್ತಾ ಮಲಗಿರುತ್ತಿದ್ದಿರಲ್ಲವೇ?ಕಾಲು ಜಾರಿತು, ಕೈ ಮುರಿಯಿತು ಎಂದು ಮನಸ್ಸಿಗೆ ಘಾತವಾಗಿ ಮಲಗಿರುತ್ತಿದ್ದದ್ದು, ಕುಟುಂಬದೊಂದಿಗೆ ಮನೆಯಲ್ಲಿದ್ದರೂ ಯಾರೋ ಹೊರಗಿನವರಂತೆ ಜೀವನ ನಡೆಸಿದಿರಿ ಅಲ್ಲವೇ? ನೆಂಟರು ಕೆಲವರು ಉದಾಸೀನದಿಂದ ಕಂಡರಲ್ಲವೇ?ಮೂಕರಂತೆ ಏನನ್ನೂ ಹೇಳಲಾಗದ ಪರಿಸ್ಥಿತಿಯಲ್ಲಿದ್ದ ನೀವು ಇನ್ನುಮುಂದೆ ಇಂತಹ ಸನ್ನಿವೇಶದಲ್ಲಿರಬೇಕಾಗಿಲ್ಲ.ಎಲ್ಲವೂ ಬದಲಾಗುತ್ತದೆ.

ನಿಮ್ಮ ಪೂರ್ವಪುಣ್ಯದಿಂದ ಗುರು ಭಗವಾನ್ ಅಧಿಕಾರಪಡೆದು ಕುಳಿತುಕೊಳ್ಳುವುದರಿಂದ ಅಧಿಕಾರಪಡೆದವರ ಸಹವಾಸ ನಿಮಗೆ ದೊರೆಯುತ್ತದೆ.ರಾಶಿಗೆ 9ನೇ ಸ್ಥಾನವನ್ನು ಐದನೇ ಸ್ಥಾನ ವೀಕ್ಷಿಸುವುದರಿಂದ ತಂದೆಯವರೊಂದಿಗೆ ಇರುವ ತಕರಾರು ದೂರವಾಗುತ್ತದೆ.ತಂದೆಯ ಔಷಧೋಪಚಾರ ಖರ್ಚುಕಡಿಮೆಯಾಗುತ್ತದೆ. ಅವರ ದೇಹಾರೋಗ್ಯ ಸುಧಾರಿಸುತ್ತದೆ. ಹನ್ನೊಂದನೇ ಮನೆಯನ್ನು ಗುರು ವೀಕ್ಷಿಸುವುದರಿಂದ ಹಿರಿಯ ಸಹೋದರ,ಸಹೋದರಿಯರೊಂದಿಗೆ ಇದ್ದ ಭಿನ್ನಾಭಿಪ್ರಾಯ ದೂರವಾಗುತ್ತದೆ.ಗಂಡ-ಹೆಂಡಿರ ದಾಂಪತ್ಯ ಬಲಗೊಳ್ಳುತ್ತದೆ.

ಮಕ್ಕಳಿಗಾಗಿ ಹೆಚ್ಚುಕಾಲ ಕಳೆಯುತ್ತೀರಿ.ನಿಮ್ಮ ಮಗಳಿಗೆ ನಿರೀಕ್ಷೆಯಂತೆ ಒಳ್ಳೆಯ ವರನೇ ಸಿಗುತ್ತಾನೆ.ಮಗನಿಗೆ ಒಳ್ಳೆಯ ಉದ್ಯೋಗ ದೊರೆಯುತ್ತದೆ.ಬೆಲೆಬಾಳುವ ಆಭರಣಗಳನ್ನು ಖರೀದಿಸುತ್ತೀರಿ.ಬಹುದಿನಗಳ ಆಶೆ-ಮನೆಯನ್ನು ಕೊಂಡುಕೊಳ್ಳುವ ಮಹದಾಶೆ ಈಗ ಈಡೇರುತ್ತದೆ.ಮನೆಯಲ್ಲಿ ಹೆಚ್ಚಿನ ಕೋಣೆಯನ್ನು ನಿರ್ಮಿಸುತ್ತೀರಿ.

ಹೊರವಲಯದಲ್ಲಿ ಸಂಪರ್ಕ ಹೆಚ್ಚಾಗುತ್ತದೆ.ಪ್ರಭಾವಶಾಲಿ ವ್ಯಕ್ತಿಗಳು ಪರಿಚಯವಾಗುತ್ತಾರೆ.ಕನ್ಯಾಮಣಿಗಳು ಉತ್ಸಾಹಭರಿತರಾಗುತ್ತಾರೆ.ಆಧ್ಯಾತ್ಮಿಕತೆಯಲ್ಲಿ ಹೆಚ್ಚು ಆಸಕ್ತರಾಗುತ್ತೀರಿ. ರಾಜಕಾರಣಿಗಳು ಮುಖಂಡನ ಒಲವು ಪಡೆಯುತ್ತಾರೆ. ಸಹೋದ್ಯೋಗಿಗಳಿಗೆ ಗೌರವ ಹೆಚ್ಚಾಗುತ್ತದೆ.ವಿದ್ಯಾರ್ಥಿಗಳು ಸದಾ ಹುಡುಗಾಟದಲ್ಲಿ ತಲ್ಲೀನರಾಗಿರುವುದು ಬದಲಾವಣೆಯಾಗುತ್ತದೆ.ಒಳ್ಳೆಯ ಸ್ನೇಹಿತರ ಸಹವಾಸ ದೊರೆಯುತ್ತದೆ.ಉನ್ನತ ವಿದ್ಯಾಭ್ಯಾಸದಲ್ಲಿ ಒಳ್ಳೆಯ ದರ್ಜೆಯಲ್ಲಿ ಗೆಲುವು ಪಡೆಯುತ್ತೀರಿ.ಸಾಹಿತ್ಯ,ಕತೆ ಮುಂತಾದ ಸ್ಪರ್ಧೆಗಳಲ್ಲಿ ಪ್ರತಿಭೆ ಹೊರಬಂದು ಬಹುಮಾನ,ಕೀರ್ತಿ ಪಡೆಯುತ್ತೀರಿ.ತಂದೆ-ತಾಯಿಯ ಒಲವು ಹೆಚ್ಚುತ್ತದೆ.

ವ್ಯಾಪಾರದಲ್ಲಿ ಹೊಸಬಗೆಯ ಸ್ಪರ್ಧೆಗಳಿಗೆ ಸರಿಯಾಗಿ ನಿಲ್ಲಲಾರದೇ ಹೋದಿರಲ್ಲವೇ?ಇನ್ನು ಮುಂದೆ ಅವುಗಳಿಗೆ ಎದಿರೇಟು ಕೊಡಲು ಎಲ್ಲಾ ಸೌಲಭ್ಯಗಳು ನಿಮಗೆ ದೊರೆಯುತ್ತವೆ.ಮೊದಲಿನ ಗಿರಾಕಿಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ.ಕೊಟ್ಟು-ತೆಗೆದುಕೊಳ್ಳುವ ವ್ಯವಹಾರ ಇನ್ನುಮುಂದೆ ಸುಗಮವಾಗುತ್ತದೆ.ಕಂಪ್ಯೂಟರ್ ಬಿಡಿಭಾಗಗಳು,ರಿಯಲ್ ಎಸ್ಟೇಟ್,ಆಮದು ರಫ್ತುಮಾಡುವವರು ಒಳ್ಳೆಯ ಲಾಭ ಪಡೆಯುತ್ತಾರೆ.

ಉದ್ಯೋಗದಲ್ಲಿ ನಿಮ್ಮ ಸೇವೆಯನ್ನು ಎಲ್ಲರೂ ಗೌರವಿಸುತ್ತಾರೆ.ಉದ್ಯೋಗದಲ್ಲಿ ಉನ್ನತಿಯನ್ನು ಪಡೆಯುತ್ತೀರಿ.ವಿರೋಧಿಗಳಾಗಿದ್ದ ಅಧಿಕಾರಿ ವರ್ಗವಾಗಿ ಹೋಗುತ್ತಾರೆ.ಕೇಳಿಕೊಂಡಿದ್ದ ಜಾಗಕ್ಕೇ ಬದಲಾವಣೆ ಪಡೆಯುತ್ತೀರಿ.ಕಂಪ್ಯೂಟರ‌್‌ನಲ್ಲಿ ಕೆಲಸ ಮಾಡುವವರಿಗೆ ವಿದೇಶಗಳಲ್ಲಿ ಕೆಲಸ ದೊರೆಯುತ್ತದೆ.ಕಲಾವಿದರಿಗೆ ಆಗಾಗ್ಗೆ ಬರುತ್ತಿದ್ದ ಅನಗತ್ಯ ಕೆಟ್ಟ ವದಂತಿಗಳು,ಕೆಟ್ಟ ಹೆಸರು ಎಲ್ಲವೂ ಬದಲಾಗುತ್ತದೆ.ನಿಮ್ಮ ಸಾಧನೆಗಳಿಗೆ ಎಲ್ಲೆಲ್ಲೂ ಒಳ್ಳೆಯ ಶ್ಲಾಘನೆ ದೊರೆಯುತ್ತದೆ.ಸರ್ಕಾರದಿಂದ ಗೌರವವನ್ನು ಪಡೆಯುತ್ತೀರಿ.

ಒಟ್ಟಿನಲ್ಲಿ ಈ ಗುರುವಿನ ಸ್ಥಾನಪಲ್ಲಟ ಬೇಸರದಿಂದ ದೂರ ನಿಂತಿದ್ದ ನಿಮ್ಮನ್ನು ಗೋಪುರದಲ್ಲಿ ಕುಳಿತುಕೊಳ್ಳುವಂತೆ ಮಾಡುವುದಲ್ಲದೆ ಧನಲಾಭ ಮತ್ತು ಮನಸ್ಸಿಗೆ ನೆಮ್ಮದಿಯನ್ನು ತಂದುಕೊಡುತ್ತದೆ.

ಪರಿಹಾರ: ಶ್ರೀ ನಕ್ಕೀರನ್ ಹಾಗು ಅರುಣಗಿರಿನಾಥರ್ ಇವರಿಂದ ಹಾಡಿಹೊಗಳಿಸಿಕೊಂಡ ಶ್ರೀ ಆದಿಶಂಕರರ ಕಣ್ಣುಬೇನೆಯನ್ನು ವಾಸಿಮಾಡಿದ ಶ್ರೀ ತಿರುಚೆಂದೂರ್ ಚೆಂದಿಲ್ ಆಂಡವರ್ ದೇವಾಲಯದಲ್ಲಿ ವಿಶಾಖ ನಕ್ಷತ್ರದ ದಿನ ಪೂಜಿಸಿ ಆರಾಧನೆ ಮಾಡಿ. ಮೂಕರಿಗೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಿ.ಒಳ್ಳೆಯದಾಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...

ನಿಮ್ಮ ಬೆರಳಲ್ಲಿ ಶಂಖ, ಚಕ್ರ, ಕಳಶ! ಯಾವುದಿದೆ?

ಭಾರತೀಯ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಬೆರಳುಗಳಲ್ಲಿ ಚಕ್ರ, ಶಂಖ, ಕಳಶ, ಶೀಪ ಆಕಾರದ ...

ಶುಭ ಮುಹೂರ್ತಕ್ಕಾಗಿ 'ಚೌಘಡಿಯಾ'

ಪ್ರತಿಯೊಂದು ಕಾರ್ಯ ಆರಂಭಿಸುವ ಮುನ್ನ, ಅದರ ಸಾಫಲ್ಯಕ್ಕಾಗಿ ಶುಭ ಮುಹೂರ್ತ ನೋಡುವುದು ಭಾರತೀಯ ...