ಹಸ್ತರೇಖೆ: ಪುಟ್ಟ ಕೈಯೊಳಗೆ ನಿಮ್ಮದೇ ಜಗತ್ತು!

ಪಂ. ದಯಾನಂದ ಶಾಸ್ತ್ರಿ

WD
ನಿಮ್ಮ ಪುಟ್ಟ ಕೈಯಲ್ಲಿ ನಿಮ್ಮ ವ್ಯಕ್ತಿತ್ವದ ಜಗತ್ತೇ ಅಡಗಿದೆ ಎಂಬುದು ನಿಮಗೆ ಗೊತ್ತೇ? ಹೌದು. ಹಸ್ತರೇಖೆ ವಿಜ್ಞಾನ ಬಹಳ ಪ್ರಾಚೀನವಾದುದಷ್ಟೇ ಅಲ್ಲದೆ ಬಹಳ ಪ್ರಸಿದ್ಧಿಯನ್ನೂ ಪಡೆದ ಜ್ಯೋತಿಷ್ಯ ಕಲೆ. ಯಾವುದೇ ವ್ಯಕ್ತಿಯ ಹಸ್ತರೇಖೆಯ ಗಹನ ಅಧ್ಯಯನದಿಂದ ವ್ಯಕ್ತಿಯ ಭೂತ, ಭವಿಷ್ಯ, ವರ್ತಮಾನದ ವಿಷಯಗಳನ್ನು ಸುಲಭವಾಗಿ ಹೇಳಬಹುದು. ಹಸ್ತರೇಖೆಯಲ್ಲಿ ಬೆರಳುಗಳ ಪಾತ್ರ ಬಹಳ ಮಹತ್ವದ್ದು. ಕೇವಲ ಬೆರಳುಗಳ ಸಹಾಯದಿಂದಲೇ ಸಂಬಂಧಪಟ್ಟ ವ್ಯಕ್ತಿಯ ಸಂಪೂರ್ಣ ಬಣ್ಣ ಬಯಲು ಮಾಡಬಹುದು.

ಬೆರಳುಗಳು ಸಣ್ಣ ದೊಡ್ಡ, ತೆಳ್ಳಗೆ- ದಪ್ಪ ಹೀಗೆ ವಿವಿಧ ಆಕಾರಗಳನ್ನು ಹೊಂದಿರುವುದರ ಮೇಲೆ ನಿಖರವಾಗಿ ಭವಿಷ್ಯ, ಭೂತವನ್ನು ಹೇಳಲಾಗುತ್ತದೆ. ಮೊದಲ ಬೆರಳನ್ನು ತೋರು, ಎರಡನೆಯದನ್ನು ಮಧ್ಯಮ, ಮೂರನೆಯದನ್ನು ಅನಾಮಿಕ ಹಾಗೂ ನಾಲ್ಕನೇ ಬೆರಳ್ನನು ಕನಿಷ್ಟ ಎಂದು ಕರೆಯಲಾಗುತ್ತದೆ. ಈ ಬೆರಳುಗಳು ಕ್ರಮವಾಗಿ ಬೃಸ್ಪತಿ, ಶನಿ, ಸೂರ್ಯ ಹಾಗೂ ಬುಧನನ್ನು ಆಧರಿಸಿರುತ್ತವೆ.

ಪ್ರತ್ಯೇಕ ಬೆರಳುಗಳನ್ನು ಪ್ರತ್ಯೇಕವಾಗಿಯೇ ವಿವಿಧ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಹೆಚ್ಚು ಉದ್ದ ಬೆರಳುಗಳುಳ್ಳ ವ್ಯಕ್ತಿ ಇನ್ನೊಬ್ಬರ ಕೆಲಸದಲ್ಲಿ ಹೆಚ್ಚು ಹಸ್ತಕ್ಷೇಪ ಮಾಡುತ್ತಾನೆ ಅರ್ಥಾತ್ ಬೇರೆಯವರ ವಿಷಯದಲ್ಲಿ ಮೂಗು ತೂರಿಸುವ ಅಭ್ಯಾಸ ಇಂಥವರಿಗೆ ಜಾಸ್ತಿ. ಉದ್ದ ಹಾಗೂ ತೆಳ್ಳಗಿನ ಬೆರಳುಗಳನ್ನು ಹೊಂದಿದ ವ್ಯಕ್ತಿ ಚತುರನಾಗಿರುತ್ತಾನೆ. ಜತೆಗೆ ನೀತಿವಂತನೂ ಆಗಿರುತ್ತಾನೆ.

ND
ಸಣ್ಣ ಬೆರಳುಗಳ ವ್ಯಕ್ತಿ ಸಂಭಾವಿತನಾಗಿರುತ್ತಾನೆ. ಆದರೆ, ತುಂಬ ಗಿಡ್ಡ ಬೆರಳುಗಳನ್ನು ಹೊಂದಿದ ವ್ಯಕ್ತಿ ಸ್ವಾರ್ಥಿ ಹಾಗ ಕ್ರೂರ ಬುದ್ಧಿ ಹೊಂದಿರುತ್ತಾನೆ. ಅಂಗುಷ್ಟದ ಹತ್ತಿರವಿರುವ ತೋರು ಬೆರಳು ಉದ್ದವಿರುವ ವ್ಯಕ್ತಿ ಇನ್ನೊಬ್ಬರು ತನ್ನ ಮಾತು ಹೆಚ್ಚು ಕೇಳಬೇಕೆಂದು ಬಯಸುತ್ತಾನೆ ಅರ್ಥಾತ್ ತನ್ನ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರುವ ಮನೋಸ್ಥಿತಿ ಉಳ್ಳವನಾಗಿರುತ್ತಾನೆ.

ಎಲ್ಲ ಬೆರಳುಗಳನ್ನು ಸರಿಯಾಗಿ ಜೋಡಿಸಿಕೊಂಡಾಗ ತೋರು ಬೆರಳು ಮತ್ತು ಮಧ್ಯಮ ಬೆರಳಿನ ನಡುವೆ ರಂಧ್ರ ಕಂಡರೆ ಅಂತಹ ವ್ಯಕ್ತಿಗೆ 35 ವರ್ಷ ವಯಸ್ಸಿನವರೆಗೆ ಹಣಕ್ಕೆ ಕೊರತೆಯಿರುತ್ತದೆ. ಮಧ್ಯಮ ಹಾಗೂ ಅನಾಮಿಕ ಬೆರಳನ್ನು ಜೋಡಿಸಿದಾಗ ಮಧ್ಯದಲ್ಲಿ ರಂಧ್ರ ಕಂಡರೆ, ಅಂತಹ ವ್ಯಕ್ತಿಯ ಜೀವನದ ಮಧ್ಯಕಾಲದಲ್ಲಿ ಹಣಕ್ಕೆ ಕೊರತೆಯಾಗುತ್ತದೆ. ಅನಾಮಿಕ ಹಾಗೂ ಕನಿಷ್ಟ ಬೆರಳು (ಕಿರುಬೆರಳು)ಗಳನ್ನು ಜೋಡಿಸಿದಾಗ ಮಧ್ಯೆ ತೂತಿದ್ದರೆ, ಅಂತಹ ವ್ಯಕ್ತಿ ಬಡವನಾಗಿರುತ್ತಾನೆ. ಸದಾ ಆತನ ಬಳಿ ಹಣಕ್ಕೆ ಕೊರತೆಯಿರುತ್ತದೆ.

ಬೆರಳುಗಳಲ್ಲಿ ಗಂಟುಗಳು ಅಷ್ಟಾಗಿ ಕಾಣಿಸದಂತಿದ್ದರೆ ಅಂತಹ ವ್ಯಕ್ತಿ ಕಲೆ, ಸಾಹಿತ್ಯ ಪ್ರೇಮಿಯಾಗಿರುತ್ತಾನೆ. ಅಥವಾ ಧಾರ್ಮಿಕತೆಯಲ್ಲಿ ಹೆಚ್ಚಾಗಿ ಆಸಕ್ತಿಯಿರುತ್ತದೆ. ಇಂತಹ ವ್ಯಕ್ತಿಗಳಿಗೆ ಸಂಸಾರಿಕತೆಯಲ್ಲಿ ಅಷ್ಟು ಆಸಕ್ತಿಯಿರುವುದಿಲ್ಲ. ಜತೆಗೆ, ಕೆಲಸ ಮಾಡುವ ಉತ್ಸುಕತೆಯೂ ಇರುವುದಿಲ್ಲ.

ಇವಿಷ್ಟು ಸಾಮಾನ್ಯ ವಿಚಾರಗಳಾದರೆ, ಹಸ್ತರೇಖೆ ನೋಡಿ ಭೂತ, ವರ್ತಮಾನಗಳನ್ನೂ ಹೇಳುವ ಹಲವು ಪಂಡಿತರಿದ್ದಾರೆ. ಇದನ್ನು ಕೈ ನೋಡಿಯೇ ಹೇಳಬೇಕಾಗುತ್ತದೆ. ಹಾಗೂ ಪ್ರತಿಯೊಬ್ಬರ ಹಸ್ತರೇಖೆಯೂ ಇನ್ನೊಬ್ಬರಿಗಿಂತ ಭಿನ್ನವಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರ ಭೂತ, ಭವಿಷ್ಯ, ವರ್ತಮಾನಗಳೂ ಬೇರೆಬೇರೆಯಿರುತ್ತದೆ. ಆದರೆ ಹಸ್ತರೇಖೆ ವಿಜ್ಞಾನದಲ್ಲಿ ಆಳ ಅಭ್ಯಾಸ ಮಾಡಿದವರು ಮಾತ್ರ ಭೂತ, ಭವಿಷ್ಯ ಹಾಗೂ ವರ್ತಮಾನಗಳನ್ನು ನಿಖರವಾಗಿ ಹೇಳಬಲ್ಲರು. ಆದರೆ ಸರಿಯಾದ ಜ್ಞಾನವಿಲ್ಲದೆ, ಹಸ್ತರೇಖೆಯಿಂದ ಭವಿಷ್ಯ ತಿಳಿಯಲು ಸಾಧ್ಯವಿಲ್ಲ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...

ನಿಮ್ಮ ಬೆರಳಲ್ಲಿ ಶಂಖ, ಚಕ್ರ, ಕಳಶ! ಯಾವುದಿದೆ?

ಭಾರತೀಯ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಬೆರಳುಗಳಲ್ಲಿ ಚಕ್ರ, ಶಂಖ, ಕಳಶ, ಶೀಪ ಆಕಾರದ ...

ಶುಭ ಮುಹೂರ್ತಕ್ಕಾಗಿ 'ಚೌಘಡಿಯಾ'

ಪ್ರತಿಯೊಂದು ಕಾರ್ಯ ಆರಂಭಿಸುವ ಮುನ್ನ, ಅದರ ಸಾಫಲ್ಯಕ್ಕಾಗಿ ಶುಭ ಮುಹೂರ್ತ ನೋಡುವುದು ಭಾರತೀಯ ...