2010ರಲ್ಲಿ ರಾಹುಲ್ ಗಾಂಧಿ ಭಾರತದ ಪ್ರಧಾನಮಂತ್ರಿ!!!

PTI
2009ರ ಮಹತ್ವದ ರಾಜಕೀಯ ಏಳುಬೀಳುಗಳನ್ನು ನಾವು ಕಣ್ಣಾರೆ ಕಂಡಿದ್ದಾಗಿದೆ. ಹಾಗಾದರೆ, 2010ರಲ್ಲಿ ಏನೇನು ನಡೆಯಲಿದೆ ಎಂಬ ಕುತೂಹಲ ಸಾಮಾನ್ಯ ನಾಗರಿಕನಿಂದ ಹಿಡಿದು, ರಾಜಕೀಯ ರಂಗದ ದಿಗ್ಗಜರವರೆಗೂ ಕುತೂಹಲ ಸಹಜವೇ. ಅಂತೆಯೇ, ಪ್ರಸಿದ್ಧ ಜ್ಯೋತಿಷಿ ಡಾ|ಸೀತಾರಾಂ ತ್ರಿಪಾಠಿ ಶಾಸ್ತ್ರಿ ಅವರು 2010ರಲ್ಲಿ ಕುತೂಹಲಭರಿತ ರಾಜಕೀಯ ಬೆಳವಣಿಗೆ ಕಾಣಲಿದೆ ಎಂದಿದ್ದಾರೆ. ಈಗಾಗಲೇ ರಾಷ್ಟ್ರದ್ಲಲಿ ಸಂಚಲನ ಮೂಡಿಸಿರುವ ಕಾಂಗ್ರೆಸ್ಸಿನ ಯುವ ನೇತಾರ ರಾಹುಲ್ ಗಾಂಧಿ 2010ರಲ್ಲಿ ಪ್ರಧಾನಿ ಪಟ್ಟೇರುವ ಸಾಧ್ಯತೆಗಳಿವೆ ಎಂದಿರುವುದು ಈಗ ಕುತೂಹಲಕ್ಕೆ ಗ್ರಾಸವಾಗಿದೆ!

ಡಾ. ಸೀತಾರಾಂ ತ್ರಿಪಾಟಿ ಶಾಸ್ತ್ರಿ ಹೇಳುವಂತೆ, ರಾಹುಲ್ ಗಾಂಧಿ ಅವರ ಜನ್ಮ ಕುಂಡಲಿಯಲ್ಲಿರುವ ರಾಜಯೋಗದಿಂದಾಗಿ ಅವರು ಪ್ರಧಾನಿಯಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ! ಕುಂಡಲಿಯಲ್ಲಿ ಪಾರಿಜಾತ ರಾಜಯೋಗ ಇರುವುದರಿಂದ ಅವರು ಖಂಡಿತವಾಗಿಯೂ ಭಾರತದ ಅತ್ಯಂತ ಯುವ ಪ್ರಧಾನಮಂತ್ರಿಯಾಗುವ ಸಾಧ್ಯತೆಗಳಿವೆ. 2010ರಲ್ಲಿ ರಾಹುಲ್ ಗಾಂಧಿಯವರಿಗೆ ರಾಜಯೋಗದ ಶಕ್ತಿ ಹೆಚ್ಚು. ಪ್ರಧಾನ ಮಂತ್ರಿಯಾಗಿ ದೇಶದಲ್ಲಿ ಸೃಷ್ಟಿಸುವ ಹೊಸ ಅಲೆಯಿಂದಾಗಿ ರಾಷ್ಟ್ರೀಯ ರಾಜಕೀಯ ರಂಗವೇ ಇವರ ಕೈಗೆ ಬಂದಂತಾಗುತ್ತದೆ. ತೆಲಂಗಾಣ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿಂದಾಗಿ ಈಗಿ ಪ್ರಧಾನಮಂತ್ರಿ ಡಾ.ಮನಮೋಹನ್ ಸಿಂಗ್ ಅವರಿಗೆ ಕಷ್ಟದ ದಿನಗಳು ಎದುರಾಗಲಿವೆ. ಮುಂದೆ ಇನ್ನೊಮ್ಮೆ ಸಿಂಗ್ ಅವರು ಪ್ರಧಾನಮಂತ್ರಿ ಆಗುವ ಯೋಗವಿಲ್ಲ.

ಸುಷ್ಮಾ ಸ್ವರಾಜ್ ಶೈನಿಂಗ್ :ಸುಷ್ಮಾ ಸ್ವರಾಜ್ ಪ್ರತಿಪಕ್ಷ ನಾಯಕಿಯಾಗಿ ಲೋಕಸಭೆಯಲ್ಲಿ ಮಹತ್ವದ ಕಾರ್ಯ ಮಾಡಲಿದ್ದು, ಪ್ರಸಿದ್ಧಿಯ ಉತ್ತುಂಗಕ್ಕೇರಲಿದ್ದಾರೆ. ಭಾರತದಲ್ಲಿ ಶುಕ್ರನ ಮಹಾದೆಶೆಯ ಕಾರಣದಿಂದ ಮಹಿಳೆಯರ ಬಲವೇ ಲೋಕಸಭೆಯಲ್ಲಿ ಹೆಚ್ಚಿರುತ್ತದೆ. ಬಿಜೆಪಿಯನ್ನು ಸುಷ್ಮಾ ಸ್ವರಾಜ್ ಉತ್ತಮವಾಗಿ ರಾಷ್ಟ್ರೀಯ ವೇದಿಕೆಯನ್ನು ಮುನ್ನಡೆಸಲಿದ್ದಾರೆ. ಆದರೂ, ಬಿಜೆಪಿಯಲ್ಲೇ ಅಂತರ್‌ಕಲಹಗಳು ಹೆಚ್ಚಾಗುತ್ತದೆ.

ಬಿಜೆಪಿಯ ಹೊಸ ಅಧ್ಯಕ್ಷ ನಿತಿನ್ ಗಡ್ಕರಿ ಅವರಿಗೆ ನೀಚಭಂಗ ರಾಜಯೋಗವಿದ್ದುದರಿಂದ ಅವರು ರಾಜಕೀಯದಲ್ಲಿ ಮೇಲೆ ಬರುವಂತಾಯಿತು. ಆದರೆ ಇವರಿಗೆ ಮುಂದೆ ತುಂಬ ಕಷ್ಟಗಳು ಎದುರಾಗುತ್ತದೆ. ಹೆಜ್ಜೆಹೆಜ್ಜೆಗಳು ಪಕ್ಷದ ವಿಚಾರದಲ್ಲಿ ಕಷ್ಟಗಳು ಎದುರಾಗುತ್ತದೆ. ಇದರಿಂದ ಸವಾಲುಗಳನ್ನು ಇವರು ಎದುರಿಸಲೇಬೇಕಾಗುತ್ತದೆ.

ಮಾಯಾವತಿ, ಲಾಲುಗೆ ನಷ್ಟ, ನಿತೀಶ್, ಮುಲಾಯಂಗೆ ಲಾಭ : 2010 ಮಾಯಾವತಿ ಅವರಿಗೆ ಅತ್ಯಂತ ಕಠಿಣ ವರ್ಷ. ಈ ಸಂದರ್ಭ ಬರಲಿರುವ ವಿಧಾನಸಭೆ ಚುನಾವಣೆಯಲ್ಲಿ ಇವರಿಗೆ ಹೀನಾಯ ಸೋಲುಂಟಾಗುವ ಸಾಧ್ಯತೆ ಹೆಚ್ಚು. ತಮ್ಮ ಹಠದಿಂದಾಗಿಯೇ ಇವರಿಗೆ ಸೋಲು ಬರುತ್ತದೆ. ಮುಲಾಯಂ ಸಿಂಗ್ ಯಾದವ್ ಅವರಿಗೆ ನೀಚಭಂಗ ರಾಜಯೋಗವಿರುವುದರಿಂದಾಗಿ 2010ರಲ್ಲಿ ಉತ್ತಮ ಪರಿಣಾಮಗಳು ಕಾಣಬಹುದು. ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಅವರಿಗೆ ಮಹತ್ವಪೂರ್ಣ ಸ್ಥಾನ ಸಿಗುವ ಲಕ್ಷಣಗಳಿವೆ. ಸಮಾಜವಾದಿ ಪಕ್ಷ ಅತ್ಯಂತ ಪ್ರಭಾವಶಾಲಿ ಪಕ್ಷವಾಗಿ ಹೊರಹೊಮ್ಮಲಿದ್ದು, ಜನಾದೇಶದ ಪ್ರಕಾರ ಮುಲಾಯಂ ಮತ್ತೆ ಮುಖ್ಯಮಂತ್ರಿಯಾಗುವ ಯೋಗ ಹೊಂದಿದ್ದಾರೆ.

ಲಾಲೂ ಪ್ರಸಾದ್ ಯಾದವ್ ಅವರ ಕುಂಡಲಿಯಲ್ಲಿ ನೀಚಭಂಗ ವಿಪರೀತ ರಾಜಯೋಗವಿರುವ ಕಾರಣ 2010 ಅವರಿಗೆ ಕೆಟ್ಟ ವರ್ಷವಾಗಲಿದೆ. ಇವರು ಹಲವು ಕಷ್ಟನಷ್ಟಗಳನ್ನು ಎದುರಿಸಬೇಕಾಗಬಹುದು. ಮುಂಬರುವ ಚುನಾವಣೆಯಲ್ಲೂ ಸೋಲು ಇವರಿಗೆ ಕಟ್ಟಿಟ್ಟ ಬುತ್ತಿ.

ನಿತೀಶ್ ಕುಮಾರ್ ಅವರಿಗೆ 2010 ಶುಭಫಲದಾಯಕವಾಗಿರಲಿದೆ. ಮುಂಬರುವ ಚುನಾವಣೆಯಲ್ಲಿ ಇವರಿಗೆ ಗೆಲುವಿನ ಸಾಧ್ಯತೆಗಳಿದ್ದು ಮತ್ತೆ ಮುಖ್ಯಮಂತ್ರಿಯಾಗುವ ಯೋಗವಿದೆ. ರಾಷ್ಟ್ರೀಯ ರಾಜಕೀಯದಲ್ಲೂ ಇವರ ಪ್ರಭಾವ ಹೆಚ್ಚಲಿದೆ.

ಕ್ರೀಡೆಯಲ್ಲೂ 2010 ಭಾರತದ ಪಾಲಿಗೆ ಶುಭದಾಯಕ. ಅಂದಿಗಿಂತ ಹೆಚ್ಚು ಪದಕ, ಪಾರಿತೋಷಕಗಳು ಭಾರತಕ್ಕೆ ದೊರೆಯಲಿವೆ.

ಡಾ.ಸೀತಾರಾಂ ತ್ರಿಪಾಠಿ ಅವರ ಭವಿಷ್ಯವಾಣಿ : 13ನೇ ಲೋಕಸಭೆಯ ಪ್ರಧಾನಮಂತ್ರಿಗಳಾಗಿ ಅಟಲ್ ಬಿಹಾರಿ ವಾಜಪೇಯಿಗಳಾಗಲಿದ್ದಾರೆ ಎಂಬ ಭವಿಷ್ಯ ಸೇರಿದಂತೆ ಹಲವು ರಾಜಕೀಯ ಭವಿಷ್ಯಗಳು ನಿಜವಾಗಿವೆ. ಅಬ್ದುಲ್ ಕಲಾಂ ರಾಷ್ಟ್ರಪತಿಯಾಗುವುದು, ರಾಜೀವ್ ಗಾಂಧಿ, ಪ್ರಮೋದ್ ಮಹಾಜನ್, ಜಿ.ಎಂ.ಬಾಲಯೋಗಿ, ಮಾಧವರಾವ್ ಸಿಂಧ್ಯಾ, ಇಂದಿರಾ ಗಾಂಧಿ ಅವರ ಅಕಾಲ ಮೃತ್ಯು, ಮನಮೋಹನ್ ಸಿಂಗ್ ಅವರಿಗೆ ಎರಡನೇ ಬಾರಿಗೆ ಪ್ರಧಾನಮಂತ್ರಿಯಾಗುವ ಯೋಗವಿರುವುದು, ಅಡ್ವಾಣಿ, ರಾಜನಾಥ ಸಿಂಗ್ ಅವರ ಪದಚ್ಯುತಿ, ಸುಷ್ಮಾ ಸ್ವರಾಜ್ ಅವರು ಲೋಕಸಭೆಯ ಪ್ರತಿಪಕ್ಷ ನಾಯಕಿಯಾಗುವುದು ಸೇರಿದಂತೆ ಹಲವು ರಾಜಕೀಯ ಮಹತ್ವದ ಘಟನೆಗಳನ್ನು ತ್ರಿಪಾಠಿ ಮೊದಲೇ ಭವಿಷ್ಯ ನುಡಿದಿದ್ದರು. ಅದು ನಿಜವಾಗಿದೆ ಕೂಡಾ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...

ನಿಮ್ಮ ಬೆರಳಲ್ಲಿ ಶಂಖ, ಚಕ್ರ, ಕಳಶ! ಯಾವುದಿದೆ?

ಭಾರತೀಯ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಬೆರಳುಗಳಲ್ಲಿ ಚಕ್ರ, ಶಂಖ, ಕಳಶ, ಶೀಪ ಆಕಾರದ ...

ಶುಭ ಮುಹೂರ್ತಕ್ಕಾಗಿ 'ಚೌಘಡಿಯಾ'

ಪ್ರತಿಯೊಂದು ಕಾರ್ಯ ಆರಂಭಿಸುವ ಮುನ್ನ, ಅದರ ಸಾಫಲ್ಯಕ್ಕಾಗಿ ಶುಭ ಮುಹೂರ್ತ ನೋಡುವುದು ಭಾರತೀಯ ...