ಜಾತಕದ ಪ್ರಕಾರ ಲಾಭ ನಷ್ಟದ ಚಂದ್ರಯಾನ

ಬುಧವಾರ, 25 ಸೆಪ್ಟಂಬರ್ 2013 (12:54 IST)

 
PR
ಪರಮೇಶ್ವರ ಶೃಂಗೇರಿ

ಯಾವುದೇ ಒಬ್ಬ ವ್ಯಕ್ತಿ ಜಾತಕದ ಪ್ರಕಾರವಾಗಿ ಆತನ ನಿರ್ಣಯವಾಗುತ್ತದೆಂಬುದು ಜೋತಿಷ್ಯ ಶಾಸ್ತ್ರದ ಮೂಲ ಚಿಂತನೆಯಾಗಿದೆ. ಈ ಜಾತಕದಲ್ಲಿ ಚಂದ್ರನು ತನ್ನದೇ ಆದ ಪ್ರಭಾವವನ್ನು ಬೀರಿದ್ದು ಲಾಭ ಮತ್ತು ವ್ಯಯದಲ್ಲಿ ವಿಶಿಷ್ಟ ಪಾತ್ರ ವಹಿಸುತ್ತಾನೆ.

ಜೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿನ ಹನ್ನೊಂದನೆಯ ಮನೆಯನ್ನು ಲಾಭಕಾರಕವೆಂತಲೂ ಹನ್ನೆರಡನೆಯ ಮನೆಯನ್ನು ವ್ಯಯ (ನಷ್ಟ) ಕಾರಕವೆಂತಲೂ ಕರೆಯುತ್ತಾರೆ.ಹನ್ನೊಂದನೆಯ ಮನೆಯಲ್ಲಿ ಅಂದರೆ ಲಾಭಭಾವದಲ್ಲಿ ಚಂದ್ರನಿದ್ದ ಪಕ್ಷದಲ್ಲಿ ಜಾತಕನು ಅತ್ಯಂತ ಸಂಪತ್ತಿನಿಂದ ಕೂಡಿದ ವ್ಯಕ್ತಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಅಲ್ಲದೇ ಈ ವ್ಯಕ್ತಿಯು ಉನ್ನತ ಸ್ಥಾನದಲ್ಲಿದ್ದು ಅಪಾರ ಕೀರ್ತಿ,ಯಶಸ್ಸು ಗಳಿಸುತ್ತಾನೆ. ಸದ್ಗುಣ ಸಂಪನ್ನನೂ,ಉತ್ತಮ ವಾಗ್ಮಿಯೂ ಆದ ಈತನಿಗೆ ವಿಶೇಷವಾಗಿ ಬುದ್ಧಿ,ಧನ-ಸಂಪತ್ತು,ಸನ್ಮಾರ್ಗದಲ್ಲಿ ನಡೆಯುವವನೂ ಆಗಿದ್ದು ಸಮಾಜದಲ್ಲಿ ಗೌರವಕ್ಕೆ ಪಾತ್ರನಾಗುತ್ತಾನೆ. ಬಿಳಿಯವರ್ಣದಿಂದ ಕೂಡಿದ ಈತ ಅಧಿಕ ಮಿತ್ರವರ್ಗದಿಂದ ಕೂಡಿದವವನಾಗಿದ್ದು, ವಾಹನಾದಿ ಸುಖ ಭೋಗವನ್ನು ಅನುಭವಿಸುತ್ತಾನೆ. ಆಯಸ್ಸಿನ ಮಧ್ಯಭಾಗದ ಆಸುಪಾಸಿನಲ್ಲಿ ರಾಜಗೌರವ,ಪ್ರಶಸ್ತಿ,ಸನ್ಮಾನಗಳು ಪ್ರಾಪ್ತವಾಗುತ್ತವೆ.

ವಿಶೇಷವಾಗಿ ಈ ತರಹದ ಜಾತಕದ ಸ್ಥಿತಿ ಹೊಂದಿರುವ ಪುರುಷರಿಗೆ ಅಧಿಕ ಶುಭಫಲಗಳು ಕಂಡುಬರುತ್ತವೆ. ಸಾರ್ವಜನಿಕ ಸಂಸ್ಥೆಯಂತಹ ಕ್ಷೇತ್ರದಲ್ಲಿ ಮುಂದಾಳತ್ವ ವಹಿಸಿಕೊಂಡು ಮುನ್ನಡೆಯುವ ಸಾಧ್ಯತೆ ಹೆಚ್ಚು. ಅಲ್ಲದೇ ಹನ್ನೊಂದನೇ ಮನೆಯ ಮೇಷ,ಮಿಥುನ,ಸಿಂಹ,ತುಲಾ,ಧನು ಮತ್ತು ಕುಂಭವಾಗಿದ್ದರೆ ರೋಗಕ್ಕೆ ಸಂಬಂಧಿಸಿದ ಫಲ ಸ್ತ್ರೀ ಜಾತಿಯ ಚಂದ್ರನಲ್ಲಿ ಹೆಚ್ಚಾಗಿ ಕಂಡುಬರುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ಸೂರ್ಯನ ರಾಶಿ ಪರಿವರ್ತನೆ: ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು ?

ರಾಶಿ ಪರಿವರರ್ತನೆ ಮಾಡಿದ ಸೂರ್ಯ , ನಿಮ್ಮ ಮೇಲೆ ಏನು ಪ್ರಭಾವಬೀರಲಿದೆ.? ಎಪ್ರಿಲ್‌‌ 14 ರಂದು ಸೂರ್ಯ ಮೇಷ ...

ನಿಮಗೆ ಶನಿ ಕಾಡುತ್ತಿದೆಯೇ? ಶನಿ ಕಾಟದಿಂದ ತಪ್ಪಿಸಿಕೊಳ್ಳಲು ಈ ಮಂತ್ರ ಪಠಿಸಿ

ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಃ . ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೇಶ್ವರಾಯ ನಮಃ ...

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...