ನಿಮ್ಮ ಜಾತಕದಲ್ಲಿ ಗ್ರಹಬಲವಿದ್ದಾಗ..

ಜ್ಯೋತಿಷ್ಯ, ಶನಿವಾರ, 19 ಅಕ್ಟೋಬರ್ 2013 (16:45 IST)

PR
PR
ಜಾತಕನ ಜಾತಕದಲ್ಲಿನ ಗ್ರಹಗಳಲ್ಲಿನ ಸ್ಥಾನ ,ದಶಾಭುಕ್ತಿ, ಅಂತರ್ದಶಾಭುಕ್ತಿ , ಕಾಲಚಕ್ರ ನಿರ್ಣಯ ಹೀಗೆ ಇವೆಲ್ಲವನ್ನೂ ಅರಿತು ನಿರ್ಣಯಿಸುವ ಫಲವೇ ಭವಿಷ್ಯ ಎಂಬುದಾಗಿ ಸಿದ್ಧಾಂತವು ಪ್ರಚುರಪಡಿಸಿದೆ. ಇದರಲ್ಲಿ ಗ್ರಹಬಲ ಎಂಬುದು ವಿಶೇಷವಾಗಿ ನಾಲ್ಕು ಪ್ರಕಾರದ ಬಲವೆಂಬುದಾಗಿ ಬಿಂಬಿಸಲ್ಪಟ್ಟಿದೆ.
ü ಸ್ಥಾನ ಬಲ: ಜಾತಕದಲ್ಲಿ ಯಾವುದೇ ಗ್ರಹವು ತನ್ನ ಉಚ್ಛ ಸ್ಥಾನದಲ್ಲಿ ಸ್ಥಿತವಾಗಿದ್ದರೆ ತನ್ನ ಮಿಶ್ರರಾಶಿ ಹಾಗೂ ಸ್ವಕ್ಷೇತ್ರದಲ್ಲಿದ್ದರೆ ಅದರ ಮೂಲ ತ್ರಿಕೋಣ ಹಾಗೂ ನವಾಂಶದಲ್ಲಿದ್ದರೆ ಅದನ್ನು ಸ್ಥಾನ ಬಲವೆಂದು ಕರೆಯುತ್ತಾರೆ. ಜಾತಕದಲ್ಲಿ ಈ ಸ್ಥಾನ ಬಂದಿರುವಾಗ ಜಾತಕನಿಗೆ ಅತಿಶಯವಾದ ಐಶ್ವರ್ಯ ವೃದ್ಧಿಯಾಗುವುದಲ್ಲದೇ ಸಾಮಾಜಿಕ ಹಾಗೂ ರಾಜಕೀಯದಲ್ಲಿ ಉತ್ತಮ ಸ್ಥಾನ ಪ್ರಾಪ್ತಿಯಾಗುತ್ತದೆ. ಇನ್ನು ಚಂದ್ರ ಶುಕ್ರರು ಸ್ತ್ರೀ ಕ್ಷೇತ್ರದಲ್ಲಿರುವಾಗಲೂ, ಉಳಿದ ಗ್ರಹಗಳು ಪುರುಷ ಕ್ಷೇತ್ರದಲ್ಲಿದ್ದಾಗಲೂ ಉತ್ತಮವಾದ ಶುಭಫಲಗಳು ದೊರೆಯುತ್ತವೆ.

ü ಜೇಷ್ಠಬಲ : ಗ್ರಹಗಳಿಗೆ ವಕ್ರ, ಅತಿವಕ್ರ , ಕುಟಿಲ, ಮಂದಾ,ಮಂದರಕ, ಸಮ, ಶೀಘ್ರ ,ಅತಿಶೀಘ್ರ, ಎಂಬ ಎಂಟು ಪ್ರಕಾರದ ಗತಿಗಳಿದ್ದು ಈ ಗ್ರಹಗಳಿಗೆ ಯುದ್ಧದಂತಹ ಸಮಯದಲ್ಲಿ ಉತ್ತರ ದಿಕ್ಕಿನಲ್ಲಿರುವ ಗ್ರಹಗಳೇ
ಬಲಶಾಲಿಯೆಂಬ ನಿಯಮವಿದೆ.ಹಾಗಾಗಿ ಜಯಶಾಲಿಯಾದ ಗ್ರಹಕ್ಕೆ ಅಧಿಕಬಲವೆಂದು , ಸೋತ ಗ್ರಹಕ್ಕೆ ಕ್ಷೀಣ ಬಲವೆಂದೂ ಕಲ್ಪಿಸಿ ಅವುಗಳ ಬಲಾಬಲವನ್ನು ವಿಮರ್ಶಿಸಿ ಜಾತಕನ ಭವಿಷ್ಯ ಫಲವನ್ನು ನಿರ್ಣಯಿಸಲಾಗುತ್ತದೆ. ಹಾಗಾಗಿ ಗ್ರಹಗಳು ತಮ್ಮ ಜೇಷ್ಠ ಬಲದಲ್ಲಿದ್ದರೆ ಜಾತಕನಿಗೆ ಉತ್ತಮ ಸ್ಥಾನಮಾನ, ಗೌರವ ಪ್ರಾಪ್ತಿ, ಯಶಸ್ಸು ಹಾಗೂ ಅತಿಶಯವಾದ ಕೀರ್ತಿ ದೊರೆಯುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ಸೂರ್ಯನ ರಾಶಿ ಪರಿವರ್ತನೆ: ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು ?

ರಾಶಿ ಪರಿವರರ್ತನೆ ಮಾಡಿದ ಸೂರ್ಯ , ನಿಮ್ಮ ಮೇಲೆ ಏನು ಪ್ರಭಾವಬೀರಲಿದೆ.? ಎಪ್ರಿಲ್‌‌ 14 ರಂದು ಸೂರ್ಯ ಮೇಷ ...

ನಿಮಗೆ ಶನಿ ಕಾಡುತ್ತಿದೆಯೇ? ಶನಿ ಕಾಟದಿಂದ ತಪ್ಪಿಸಿಕೊಳ್ಳಲು ಈ ಮಂತ್ರ ಪಠಿಸಿ

ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಃ . ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೇಶ್ವರಾಯ ನಮಃ ...

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...