ಸಿಂಹ ರಾಶಿಯವರು ಹೀಗಿರ್ತಾರೆ

ಗುರುವಾರ, 30 ಜನವರಿ 2014 (13:49 IST)

 
PR
ಮಕ್ಕಳು: ರಾಶಿಯ ಮಕ್ಕಳು ಯಾವಾಗಲೂ ಗುಂಪಿನಲ್ಲಿ ನಾಯಕರಾಗಿರುತ್ತಾರೆ. ಅದು ಆಟದ ಮೈದಾನದಲ್ಲಿರಬಹುದು, ಅಥವಾ ತರಗತಿಯಲ್ಲಿರಬಹುದು. ಎಲ್ಲಿದ್ದರೂ ತಂಡಕ್ಕೆ ಸಿಂಹ ರಾಶಿಯ ಮಗುವೇ ಪುಟಾಣಿ ಹೀರೋ/ ಹೀರೋಯಿನ್. ಈ ರಾಶಿಯ ಮಕ್ಕಳು ತುಂಬ ಬುದ್ಧಿವಂತರಾಗಿರುತ್ತಾರೆ. ಖುಷಿಯಿಂದಿರುತ್ತಾರೆ. ಜಗಳದಲ್ಲೂ ಅಷ್ಟೆ, ಸಿಟ್ಟಿಗೆದ್ದ ಸಿಂಹದಂತೆಯೇ ಸಿಂಹ ರಾಶಿಯ ಮಕ್ಕಳು ಕಾದಾಡುತ್ತಾರೆ. ಹಾಗಾಗಿ ಜಗಳಕ್ಕೆ ಇವರನ್ನು ಉತ್ತೇಜಿಸುವುದು ಬೇಡ.

ಈ ಮಕ್ಕಳನ್ನು ತುಂಬ ಕೀಳಾಗಿ ಕಾಣಬೇಡಿ. ಇದರಿಂದ ಅವರಿಗೆ ಮಾನಸಿಕವಾಗಿ ಆಘಾತವಾಗುತ್ತದೆ. ಮಕ್ಕಳ ಗುಂಪಿನಲ್ಲಿ ಬಾಸ್ ಆಗಿ ಬೀಗಿದರೆ ಅದು ಅವರ ಹುಟ್ಟುಗುಣ. ಅದನ್ನು ಏನು ಮಾಡಿದರೂ ಹೋಗಲಾಡಿಸಲು ಸಾಧ್ಯವಾಗೋದಿಲ್ಲ. ಅಗತ್ಯ ಬಂದರೆ, ಬೈಯ್ಯದೆ, ಹೊಡೆಯದೆ, ಹಾಗೆಲ್ಲಾ ಬಾಸ್ ಥರ ಆಡಬಾರದು ಪುಟ್ಟಾ, ಇನ್ನೊಬ್ಬರ ಮೇಲೆ ಡಾಮಿನೇಟ್ ಮಾಡಬಾರದೆಂದು ತಿಳಿಸಿ ಹೇಳಿ.

ಸ್ವಲ್ಪ ತೋರಿಕೆಯ ಸ್ವಭಾವ ಇವರಲ್ಲಿ ಜಾಸ್ತಿ. ಎಡವಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಜಾಯಮಾನ ಇವರದ್ದು. ಇನ್ನೊಬ್ಬರ ಗಮನ ಸೆಳೆಯುವುದು ಇವರಿಗಿಷ್ಟ. ಅಷ್ಟೇ ಅಲ್ಲ, ಮನೆಯಲ್ಲಿ ಶುದ್ಧ ಸೋಮಾರಿಗಳಿವರು. ಒಂದು ವಸ್ತುವನ್ನು ಕೂಡಾ ಆಚೀಚೆ ಇಡಲಾರರು. ಇಂಥ ಸಂದರ್ಭ ಅವರಿಗೆ, ಅವರವರ ಕೆಲಸ ಅವರವರೇ ಮಾಡಬೇಕೆಂಬುದನ್ನು ಸೂಚ್ಯವಾಗಿ ಹೇಳುತ್ತಾ ಬನ್ನಿ. ಗಿಡವಿರುವಾಗಲೇ ಬಗ್ಗಿಸದಿದ್ದರೆ ಮರವಾದ ಮೇಲೆ ಬಗ್ಗಿಸೋದು ಕಷ್ಟ.

ಇನ್ನು ಸಿಂಹ ರಾಶಿಯ ಮಕ್ಕಳ ಹೆತ್ತವರು ಮೊದಲು ಮಾಡಬೇಕಾದ ಕೆಲಸ ತಮ್ಮ ಮಗುವಿಗೆ ಇನ್ನೊಬ್ಬರ ಮನೋಭಾವಕ್ಕೂ ಗೌರವ ನೀಡಬೇಕೆಂಬುದನ್ನು. ಇನ್ನೊಬ್ಬರನ್ನು ಹಗುರವಾಗಿ ಕಾಣದಂತೆ ಅವರಿಗೆ ತಿಳಿ ಹೇಳಬೇಕು. ಸಿಂಹ ರಾಶಿಯ ಮಕ್ಕಳು ತುಂಬ ನಾಚಿಕೆಯ ಸ್ವಭಾವವಿರೋದು ಕಡಿಮೆ. ಹಾಗಿದ್ದರೂ, ಅವರಿಗೆ ತುಂಬ ಪ್ರೇತ್ಸಾಹ ನೀಡಿ ಮಕ್ಕಳಾಗಿದ್ದಾಗಲೇ ಅವರನ್ನು ತೆರೆದುಕೊಳ್ಳಲು ಹೇಳಿಕೊಡಿ.



ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ಸೂರ್ಯನ ರಾಶಿ ಪರಿವರ್ತನೆ: ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು ?

ರಾಶಿ ಪರಿವರರ್ತನೆ ಮಾಡಿದ ಸೂರ್ಯ , ನಿಮ್ಮ ಮೇಲೆ ಏನು ಪ್ರಭಾವಬೀರಲಿದೆ.? ಎಪ್ರಿಲ್‌‌ 14 ರಂದು ಸೂರ್ಯ ಮೇಷ ...

ನಿಮಗೆ ಶನಿ ಕಾಡುತ್ತಿದೆಯೇ? ಶನಿ ಕಾಟದಿಂದ ತಪ್ಪಿಸಿಕೊಳ್ಳಲು ಈ ಮಂತ್ರ ಪಠಿಸಿ

ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಃ . ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೇಶ್ವರಾಯ ನಮಃ ...

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...