ಮೇಷ ಈ ರಾಶಿಯವರಿಗೆ ವರ್ಷದ ಆರಂಭದಲ್ಲಿ ಕಳ್ಳರ ಭಯವಿರುತ್ತದೆ, ಬೆಂಕಿಯಿಂದ ಅನಾಹುತವಾಗಬಹುದು ಉನ್ನತ ಅಧಿಕಾರಿಗಳಿಂದ ತೊಂದರೆ ಸಂಭವಿಸುತ್ತದೆ. ಆರೋಗ್ಯದ ಕಡೆ ಗಮನಹರಿಸುವುದು ಸೂಕ್ತ, ಜೀವನದಲ್ಲಿ ಹೆಚ್ಚು ಕಷ್ಟ ನಷ್ಟಗಳು ಬರುತ್ತವೆ, ಇದರಿಂದ ಕೋಪದ ಸ್ವಭಾವವು ಹೆಚ್ಚಾಗುವುದು, ನೀವು ನಂಬಿದವರೇ ನಿಮಗೆ ಮೋಸ ಮಾಡುತ್ತಾರೆ. ಹಣದ ವಿಚಾರದಲ್ಲಿ ಜಾಗೃತರಾಗಿರಬೇಕು,ಎಲ್ಲರೊಂದಿಗೆ ನಿಷ್ಟೂರ ಹೊಂದುತ್ತೀರಿ. ನಿಮ್ಮ ಕನಸುಗಳು ಸುಲಭದಲ್ಲಿ ನನಸಾಗಲಿವೆ. ವರ್ಷದ ಮಧ್ಯದಿಂದ ಧನಲಾಭವು, ಸ್ವಂತ ವ್ಯಾಪಾರದಲ್ಲಿ ಅಭಿವೃದ್ದಿಯು, ಉದ್ಯೋಗದಲ್ಲಿ ಒಳ್ಳೆಯ ಅಭಿವೃದ್ದಿಯನ್ನು ಹೊಂದುವಿರಿ,