ಬೆಂಗಳೂರು: ಇಂದಿನಿಂದ ನಾಲ್ಕು ವಾರಗಳ ಕಾಲ ಆಷಾಢ ಮಾಸದ ಶುಕ್ರವಾರದಂದು ದೇವಿಗೆ ವಿಶೇಷ ಪೂಜೆ ನೆರವೇರಿಸಲಾಗುತ್ತದೆ. ಈ ಹಿನ್ನಲೆಯಲ್ಲಿ ಇಂದಿನಿಂದ ನಾಡದೇವತೆ ಚಾಮುಂಡೇಶ್ವರಿಗೆ ಮುಂದಿನ ನಾಲ್ಕು ಶುಕ್ರವಾರ ವಿಶೇಷ ಪೂಜೆ ನಡೆಯಲಿದೆ.ಆಷಾಢ ಮಾಸದಲ್ಲಿ ಬರುವ ಈ ನಾಲ್ಕು ಶುಕ್ರವಾರ ಯಾವ ದೇವಿಯನ್ನು ಆರಾಧಿಸಿದರೆ ಏನು ಫಲ ಎಂದು ನೋಡೋಣ. ಇಂದು ಮೊದಲನೇ ಶುಕ್ರವಾರವಾಗಿದ್ದು, ಸ್ವರ್ಣಾಂಬಿಕಾ ದೇವಿಯನ್ನು ಆರಾಧಿಸಬೇಕು. ಇದರಿಂದ ಐಶ್ವರ್ಯ ವೃದ್ಧಿಯಾಗಲಿದೆ.ಎರಡನೇ ಶುಕ್ರವಾರ ಕಾಳಿ ಸ್ವರೂಪಿ ದೇವಿಯನ್ನು ಆರಾಧಿಸುವುದರಿಂದ ವಿದ್ಯಾರ್ಥಿಗಳಿಗೆ