ಬೆಂಗಳೂರು: ಆಶ್ಲೇಷ ನಕ್ಷತ್ರ ಹೆಸರಿಗೆ ತಕ್ಕ ಹಾಗೆ ಹಠ, ಮುಂಗೋಪ ಜಾಸ್ತಿ ಇರುವ ಗುಣ ಸ್ವಭಾವಗಳನ್ನು ಹೊಂದಿದೆ ಎನ್ನಲಾಗುತ್ತದೆ.ಈ ನಕ್ಷತ್ರದಲ್ಲಿ ಜನಿಸಿದವರು ತಮ್ಮ ಕಾರ್ಯ ಸಾಧನೆಗಾಗಿ ಏನು ಬೇಕಾದರೂ ಮಾಡಲು ತಯಾರಾಗಿರುತ್ತಾರೆ. ಈ ನಕ್ಷತ್ರದವರಿಗೆ ತಾವು ಹೇಳಿದ್ದೇ ನಡೆಯಬೇಕು ಎಂಬ ಹಠವಿರುತ್ತದೆ. ಅಲ್ಲದೆ, ತಮ್ಮ ಗುರಿ ಸಾಧನೆಗಾಗಿ ಯಾರನ್ನೂ ನಿಷ್ಠುರ ಮಾಡಿಕೊಳ್ಳಲೂ ತಯಾರಾಗಿರುತ್ತಾರೆ.ಈ ಹಠದಿಂದಾಗಿಯೇ ಈ ನಕ್ಷತ್ರದಲ್ಲಿ ಜನಿಸಿದ ವ್ಯಕ್ತಿಗಳ ವೃತ್ತಿ ಜೀವನ ಉತ್ತಮವಾಗಿರುತ್ತದೆ. ಎಷ್ಟೇ ನಿಷ್ಠುರರಾಗಿದ್ದರೂ ಬಂಧು ವರ್ಗದವರ