ಬೆಂಗಳೂರು: ಆಯುರ್ವೇದದ ಪ್ರಕಾರ ಬೆಳಿಗ್ಗಿನ ಜಾವ 3.00 ರಿಂದ 6.00 ರವರೆಗಿನ ಮುಹೂರ್ತವನ್ನು ಬ್ರಾಹ್ಮಿ ಮುಹೂರ್ತ ಎನ್ನಲಾಗುತ್ತದೆ. ಈ ಸಮಯದಲ್ಲಿ ಎದ್ದೇಳುವುದರಿಂದ ಆಗುವ ಉಪಯೋಗಗಳೇನು ಗೊತ್ತಾ?ಪ್ರತಿನಿತ್ಯ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದೇಳುವುದರಿಂದ ಶರೀರದ ಸೌಂದರ್ಯ, ಬಲ, ವಿದ್ಯೆ, ಬುದ್ಧಿ ಹಾಗೂ ಆರೋಗ್ಯ ವೃದ್ಧಿಯಾಗುತ್ತದೆ. ಈ ಸಮಯದಲ್ಲಿ ನಿದ್ರಿಸುವುದು ಶಾಸ್ತ್ರಬದ್ಧವಾಗಿ ನಿಷಿದ್ಧ.ವೈಜ್ಞಾನಿಕವಾಗಿಯೂ ಈ ಸಮಯದಲ್ಲಿ ವಾಯುಮಂಡಲ ವಿಷ ಮುಕ್ತವಾಗಿರುವುದರಿಂದ ಈ ಸಮಯದಲ್ಲಿ ಗಾಳಿ ಸೇವನೆ ಮಾಡುವುದು ಶ್ವಾಸಕೋಶಕ್ಕೆ ಉತ್ತಮ. ಈ ಮುಹೂರ್ತದಲ್ಲಿ ಎದ್ದೇಳುವವರ