ಬೆಂಗಳೂರು: ಒಬ್ಬೊಬ್ಬ ದೇವತೆಯ ಉಪಾಸನೆ ಮಾಡಿದರೆ ಒಂದೊಂದು ಫಲ ಸಿಗುತ್ತದೆ. ಬೃಹಸ್ಪತಿಯ ಆರಾಧನೆಯಿಂದ ಬ್ರಹ್ಮ ವರ್ಚಸ್ಸು, ಇಂದ್ರನ ಆರಾಧನೆಯಿಂದ ಇಂದ್ರಿಯ ಪಾಟವ ಲಭಿಸುತ್ತದೆ.ಹಾಗೆಯೇ ದಕ್ಷಪ್ರಜಾಪತಿಗಳ ಆರಾಧನೆಯಿಂದ ಪ್ರಜಾಸಂಪತ್ತು, ಸತ್ಸಂತಾನ, ಮಹಾಲಕ್ಷ್ಮೀ ಉಪಾಸನೆಯಿಂದ ಐಶ್ವರ್ಯ, ಅಗ್ನಿಯಿಂದ ತೇಜಸ್ಸು ವಸುಗಳಿಂದ ಸಂಪತ್ತು, ಅದಿತಿಯಿಂದ ಅನ್ನಾಹಾರ, ದೇವತೆಗಳಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ.ವಿಶ್ವದೇವತೆಗಳಿಂದ ಭೂ ಸಂಪತ್ತು, ಅಶ್ವಿನಿ ದೇವತೆಗಳಿಂದ ಆರೋಗ್ಯ ವೃದ್ಧಿ, ಈಶ್ವರನಿಂದ ವಿದ್ಯೆ, ಗಂಧರ್ವರಿಂದ ಸ್ಪುರದ್ರೂಪ, ಊರ್ವಶಿಯರಿಂದ ಸ್ತ್ರೀ ವಿಹಾರ, ಗೌರೀ ಪೂಜೆಯಿಂದ ಅನ್ಯೋನ್ಯತೆ, ಸುಖ